ಕಾರವಾರ: ಅಂಗನವಾಡಿ ಮಕ್ಕಳಿಗೆ ಕುಡಿಯುವ ನೀರಿಗಾಗಿ ಶಿರಸಿಯ ಗೌರಿ ನಾಯ್ಕ್ (Gauri Naik) ನಡೆಸಿದ ಹೋರಾಟಕ್ಕೆ ಸರ್ಕಾರ ಕಡೆಗೂ ಮಣಿದಿದೆ.
ಭಾರೀ ಟೀಕೆ, ಆಕ್ರೋಶ, ಪ್ರತಿಭಟನೆಗಳ ನಂತ್ರ ಗೌರಿ ನಾಯ್ಕ್ ಅವರಿಗೆ ಬಾವಿ ತೋಡುವುದನ್ನು ಮುಂದುವರಿಸಲು ಉತ್ತರ ಕನ್ನಡ ಜಿಲ್ಲಾಡಳಿತ ಅನುಮತಿ ನೀಡಿದೆ. ಇಂದು ಸಂಸದ ಅನಂತ್ ಕುಮಾರ್ ಹೆಗಡೆ (Ananth Kumar Hegde) ಸ್ಥಳಕ್ಕೆ ಭೇಟಿ ನೀಡಿದ್ರು. ಡಿಸಿಗೆ ಕರೆ ಮಾಡಿ ಕ್ಲಾಸ್ ತಗೊಂಡ್ರು. ಬಾವಿ ತೋಡಲು ಅನುಮತಿ ನೀಡಬೇಕು ಎಂದು ತಾಕೀತು ಮಾಡಿದರು.
ಕೂಡಲೇ ಇದಕ್ಕೆ ಗಂಗೂಬಾಯಿ ಮಾನಕರ್ ಸ್ಪಂದಿಸಿ, ಬಾವಿ ತೋಡುವುದನ್ನು ಮುಂದುವರಿಸಲು ಗೌರಿ ನಾಯ್ಕ್ ಅವರಿಗೆ ಪರ್ಮಿಷನ್ ಕೊಟ್ಟರು. ಬಾವಿಯಲ್ಲಿ ನೀರು ಬಂದ ನಂತ್ರ ಬಾವಿಗೆ ‘ಗೌರಿ ಬಾವಿ’ ಎಂದು ಹೆಸರಿಡುವ ಭರವಸೆಯನ್ನು ಕೂಡ ಸಂಸದರು ನೀಡಿದ್ರು. ಇದಕ್ಕೆ ಗೌರಿ ನಾಯ್ಕ್ ಸಂತಸ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಗುರುವಾರ ಮುದ್ದಹನುಮೇಗೌಡ ಕಾಂಗ್ರೆಸ್‌ಗೆ ಸೇರ್ಪಡೆ
ಗೌರಿ ನಾಯ್ಕ್ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶ ನಗರದಲ್ಲಿ ಏಕಾಂಗಿಯಾಗಿ ಬಾವಿ ತೋಡ್ತಿದ್ದಾರೆ. ಆದ್ರೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸರ್ಕಾರ ಇದಕ್ಕೆ ಅಡ್ಡಿಪಡಿಸಲು ನೋಡಿತ್ತು. ಜನವರಿ 30 ರಿಂದ ಗೌರಿಯವರು ಪೆಬ್ರವರಿ 18ರ ವರೆಗೂ 30 ಅಡಿಗೂ ಹೆಚ್ಚು ಆಳ ಏಕಾಂಗಿಯಾಗಿ ಬಾವಿ ತೋಡಿದ್ದಾರೆ.