ಬೆಂಗಳೂರು: ಗೌರಿ ಲಂಕೇಶ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದು ಒಬ್ಬ ಆಗಂತುಕ ಮಾತ್ರ ಎಂದು ಹೇಳಲಾಗುತ್ತಿದೆ. ಗೌರಿ ಅವರು ಗೇಟ್ ತೆಗೆಯುತ್ತಿದ್ದ ಹಾಗೆಯೇ ಆಗಂತುಕ ಒಟ್ಟು 6 ಸುತ್ತು ಗುಂಡು ಹಾರಿಸಿದ್ದಾನೆ.
ಆಗಂತುಕ ಗುಂಡು ಹಾರಿಸಿದಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಗೌರಿ ಅವರು ನೇರವಾಗಿ ಮನೆಯ ಒಳಗಡೆ ಓಡಲು ಆರಂಭಿಸಿದರೂ ಗುಂಡಿನ ತೀವ್ರತೆಗೆ ವರಾಂಡದಲ್ಲಿಯೇ ಕುಸಿದು ಬಿದ್ದಿದ್ದಾರೆ. ಗೌರಿ ಅವರು ಕುಸಿದು ಬೀಳುತ್ತಿದ್ದಂತೆ ಹತ್ತಿರ ಬಂದ ಆಗಂತುಕ ನೇರವಾಗಿ ಎದೆ ಭಾಗಕ್ಕೆ ಗುಂಡು ಹಾರಿಸಿದ್ದಾನೆ.
- Advertisement 2
- Advertisement 3
ಗೌರಿ ಲಂಕೇಶ್ ಗೇಟ್ ತೆರೆಯುವುದು, ಗುಂಡು ಬೀಳ್ತಿದ್ದ ಹಾಗೆ ಓಡಿ ಬಂದು ಕುಸಿದು ಬೀಳೋದು ಹಾಗೂ ಆಗಂತುಕ ತೀರ ಹತ್ತಿರ ಬಂದು ಗುಂಡಿಕ್ಕೋ ದೃಶ್ಯಗಳು ಗೌರಿ ಅವರ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ಹೇಳಲಾಗಿದೆ.
- Advertisement 4
ಆಗಂತುಕ ಹಾಗೂ ಆತನ ಸಹಚರರು ಹೆಲ್ಮೆಟ್ ಧರಿಸಿ ಬಂದು ಈ ಕೃತ್ಯ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಗೌರಿ ಅವರ ನೆರೆಹೊರೆಯವರ ಮನೆಯ ಮತ್ತು ಆರ್.ಆರ್.ನಗರದ ರಸ್ತೆ ಬದಿಯ ಅಂಗಡಿಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.