ಬೆಂಗಳೂರು: ವಿಚಾರವಾದಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಜಾಡು ಹಿಡಿದು ಚಿಕ್ಕಮಗಳೂರಿಗೆ ಹೋದ ಪೊಲೀಸ್ ತಂಡ ಶಂಕಿತ ಸಂದೀಪ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Advertisement
ನಿರಂತರ ಬೆಂಗಳೂರಿನ ನಂಟು ಹೊಂದಿದ್ದ ಸಂದೀಪ್, ಫೇಸ್ ಬುಕ್ ನಲ್ಲಿ ಹಲವು ಬಾರು ಗೌರಿಲಂಕೇಶ್ ವಿರೋಧಿಸಿ ಕಾಮೆಂಟ್ ಹಾಕಿದ್ದನು. ಎರಡು ತಿಂಗಳ ಹಿಂದೆ ಬೆಂಗಳೂರಲ್ಲಿ ಮೊಬೈಲ್ ಕಳೆದುಕೊಂಡಿದ್ದನು. ಆ ಮೊಬೈಲ್ ಬೆಂಗಳೂರಿನ ಓರ್ವನಿಗೆ ಸಿಕಿತ್ತು. ಆತನೊಂದಿಗೆ ಸಂದೀಪ್ ನಿರಂತರ ಸಂಪರ್ಕದಲ್ಲಿದ್ದನು. ಆ ಬಳಿಕ 15 ದಿನಗಳ ಹಿಂದೆಯಷ್ಟೇ ಸಂದೀಪ್ ಬೆಂಗಳೂರಿಗೆ ಬಂದು ಹೋಗಿದ್ದನು. ಈ ಜಾಡು ಹಿಡಿದು ಸಿಸಿಬಿ ಪೊಲೀಸರು ಇದೀಗ ಶಂಕಿತ ಸಂದೀಪನ ವಿಚಾರಣೆ ನಡೆಸುತ್ತಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.
Advertisement
Advertisement
ಮಂಗಳವಾರ ರಾತ್ರಿ ಸುಮಾರು 7.30 ರ ಸುಮಾರಿ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. ಸದ್ಯ ಗೌರಿ ಲಂಕೇಶ್ ಅವರ ಮೃತದೇಹವನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಗೌರಿ ಮನೆಯ ಹಾಗೂ ಸ್ಥಳಿಯ ಸಿಸಿಟಿವಿ ಒಟ್ಟು 33 ಸಿಸಿಟಿವಿಗಳನ್ನು ತಪಾಸಣೆ ನಡೆಸುತ್ತಿದ್ದಾರೆ.
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆಗಂತುಕರು ಈ ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿದ್ದು, ಬೇರೆ ಬೇರೆ ಕಡೆ ತನಿಖಾ ತಂಡ ತೆರಳಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿರೋ ಸಿಎಂ https://t.co/fTqumUGQ49#Bengaluru #Siddaramaiah #Journalist #GauriLankesh pic.twitter.com/OwoqEg522z
— PublicTV (@publictvnews) September 6, 2017
ವಿಡಿಯೋ: ಗೌರಿ ಲಂಕೇಶ್ ಹತ್ಯೆ ಬಗ್ಗೆ ಪ್ರತ್ಯಕ್ಷದರ್ಶಿ ಹೇಳಿದ್ದೇನು? https://t.co/PTPD3mxs4z#GouriLankesh #Murder #Eyewitness #Video pic.twitter.com/xEdcULX95z
— PublicTV (@publictvnews) September 6, 2017
ಗೌರಿ ಲಂಕೇಶ್ ಹತ್ಯೆ ಹಿಂದೆ ನಕ್ಸಲರ ಕೈವಾಡ ಶಂಕೆ https://t.co/EmWh1EbouV #GauriLankeshMurder #Shootout #Naxalite pic.twitter.com/8VU0ozi9Lh
— PublicTV (@publictvnews) September 6, 2017
3 ದಿನದ ಹಿಂದೆಯೇ ಗೌರಿ ಲಂಕೇಶ್ ಹತ್ಯೆಗೆ ಯತ್ನ https://t.co/zzcaStsfWq #GauriLankesh #Shootout #Bengaluru pic.twitter.com/ICSRtCvdeO
— PublicTV (@publictvnews) September 6, 2017
'ನಮ್ಮ ಶತ್ರು' ಯಾರೆಂದು ನಮ್ಮೆಲ್ಲರಿಗೂ ಗೊತ್ತು- ಸಾವಿಗೂ ಮುನ್ನ ಟ್ವೀಟ್ ಮಾಡಿದ್ದ ಗೌರಿ ಲಂಕೇಶ್ https://t.co/rnGz4i9KLy #GauriLankesh #Shootout #Tweet pic.twitter.com/jT6qqRbPJS
— PublicTV (@publictvnews) September 6, 2017