– ಸ್ಕಾಟ್ಲ್ಯಾಂಡ್ ಪೊಲೀಸರಿಂದಲೂ ತನಿಖೆ
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಕೇಸ್ನಲ್ಲಿ ಎಸ್ಐಟಿ ತನಿಖೆ ಚುರುಕಾಗಿದ್ದು, ಗೌರಿ ಲಂಕೇಶ್ ಮನೆ ಸುತ್ತಮುತ್ತಲ ಏರಿಯಾದ ಸಿಸಿಟಿವಿ ದೃಶ್ಯದಲ್ಲಿ ರೌಡಿಗಳ ಚಲನವಲನ ಪತ್ತೆಯಾಗಿದೆ.
ಸಿಸಿಟಿವಿಯಲ್ಲಿ ರೌಡಿ ಕುಣಿಗಲ್ ಗಿರಿ ಸಹಚರರ ಚಲನವಲನ ಪತ್ತೆಯಾಗಿದೆ. ಈಗಾಗಲೇ ಗಿರಿಯ ಹಲವು ಸಹಚರರನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಜೊತೆಗೆ ಇದುವರೆಗೂ ಗೌರಿ ಹತ್ಯೆ ಪ್ರಕರಣದಲ್ಲಿ 100 ಮಂದಿಯನ್ನು ವಿಚಾರಣೆ ಮಾಡಿದ್ದಾರೆ.
Advertisement
Advertisement
ರಾಮನಗರ ಕೋರ್ಟ್ನಲ್ಲಿರುವ ಕುಣಿಗಲ್ ಗಿರಿಯನ್ನು ಕೋರ್ಟ್ ಅನುಮತಿ ಪಡೆದು ವಶಕ್ಕೆ ಪಡೆಯಲು ಎಸ್ಐಟಿ ತಂಡ ನಿರ್ಧಾರ ಮಾಡಿದೆ. ಅತ್ತ ಮಹಾರಾಷ್ಟ್ರದಲ್ಲೂ ತನಿಖೆ ಚುರುಕುಗೊಳಿಸಿರುವ ಎಸ್ಐಟಿ ಟೀಂ, ಸನಾತನ ಸಂಸ್ಥೆ ಸದಸ್ಯರು ಸೇರಿದಂತೆ ಹಲವರನ್ನು ಪ್ರಶ್ನೆ ಮಾಡ್ತಿದೆ.
Advertisement
Advertisement
ಗೌರಿ ಹತ್ಯೆ ಕೇಸ್ನಲ್ಲಿ ಮಹತ್ವದ ಸುಳಿವು ಪತ್ತೆಯಾಗಿದೆ. ಆದ್ರೆ ಯಾವುದೇ ಸುಳಿವು ಬಿಟ್ಟುಕೊಡಲ್ಲ ಅಂತಾ ಗೃಹಸಚಿವ ರಾಮಲಿಂಗಾರೆಡ್ಡಿ ಹೇಳಿರೋದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಇಷ್ಟೆಲ್ಲದ್ರ ಮಧ್ಯೆ ಗೌರಿ ಲಂಕೇಶ್ ಮರ್ಡರ್ ಕೇಸ್ ತನಿಖೆಗೆ ಸ್ಕಾಟ್ಲ್ಯಾಂಡ್ ಪೊಲೀಸರೂ ಸಾಥ್ ಕೊಟ್ಟಿದ್ದು, ಗುರುವಾರದಂದು ಇಬ್ಬರು ಸ್ಕಾಟ್ಲ್ಯಾಂಡ್ ಪೊಲೀಸರು ಬೆಂಗಳೂರಿಗೆ ಬಂದು ತನಿಖೆ ಶುರು ಮಾಡಿದ್ದಾರೆ.