ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಅಧಿಕಾರಿಗಳು ಬಂಧಿತ ಆರೋಪಿಗಳ ವಿಚಾರಣೆ ಮತ್ತು ಹೆಚ್ಚಿನ ತನಿಖೆ ನಡೆಸುತ್ತದ್ದಾರೆ. ಗೌರಿ ಲಂಕೇಶ್ ಹತ್ಯೆಮಪ್ರಕರಣದಲ್ಲಿ ಮಾಜಿ ಸೇನಾಧಿಕಾರಿಯ ಕೈವಾಡ ಇರೋ ಬಗ್ಗೆ ವಿಶೇಷ ತನಿಖಾ ತಂಡ ಅನುಮಾನ ವ್ಯಕ್ತಪಡಿಸಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.
ಬಲಪಂಥೀಯ ಸಂಘಟನೆಯೊಂದರಲ್ಲಿ ಪ್ರಮುಖ ಹುದ್ದೆಯಲ್ಲಿರುವ ನಾಲ್ವರಲ್ಲಿ ಒಬ್ಬರು ನಿವೃತ್ತ ಕರ್ನಲ್. ಇವರೇ ಪ್ರಮುಖ ಆರೋಪಿಯಾಗಿರುವ ಅಮಿತ್ ಕಾಳೆಗೆ ಗೌರಿ ಹತ್ಯೆ ಮಾಡುವಂತೆ ಸೂಚನೆ ನೀಡಿದ್ದರು ಬಗ್ಗೆ ಶಂಕೆಗಳು ವ್ಯಕ್ತವಾಗಿವೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.
Advertisement
ಸಂಚು ರೂಪಿಸಿದ ಬಳಿಕ ಹತ್ಯೆಗೆ ಬೇಕಾದ ತಯಾರಿಗಾಗಿ ಪ್ರತಿ ತಿಂಗಳು ಆ ಬಲಪಂಥೀಯ ಸಂಘಟನೆ ಕಾಳೆಗೆ 1 ಲಕ್ಷದ 25 ಸಾವಿರ ರೂಪಾಯಿಯನ್ನು ನೀಡಿದೆಯಂತೆ. ಇನ್ನು ಪ್ರಕರಣದಲ್ಲಿ ಇನ್ನೂ ಮೂರು ಮಂದಿಗಾಗಿ ಹುಡುಕಾಟ ನಡೆಯುತ್ತಿದ್ದು ಅವರು ತಪ್ಪಿಸಿಕೊಂಡು ಓಡಾಡಲು ಆ ಸಂಘಟನೆಯೇ ನೆರವು ನೀಡ್ತಿದೆ ಅಂತ ಎಸ್‍ಐಟಿ ಮೂಲಗಳು ತಿಳಿಸಿವೆ.