ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಶಂಕಿತ ಆರೋಪಿ ನವೀನ್ ಕುಮಾರ್‍ನನ್ನು ಎಸ್ ಐಟಿ ತಂಡ ಬಂಧಿಸಿ ಜೈಲಿನಲ್ಲಿ ಇರಿಸಿದ್ದಾರೆ. ಇದೀಗ ನವೀನ್ ಜೈಲಿನಿಂದಲೇ ನ್ಯಾಯಾಧೀಶರಿಗೆ ಮಂಪರು ಪರೀಕ್ಷೆ ಬೇಡವೆಂದು ಪತ್ರ ಬರೆದಿದ್ದಾನೆ.
ಈ ಹಿಂದೆ ಆರೋಪಿಯನ್ನು ಮಂಪರು ಪರಿಕ್ಷೆ ಮಾಡಲು ನ್ಯಾಯಾಲಯ ಹೇಳಿದಾಗ ಅದಕ್ಕೆ ಆರೋಪಿಯೂ ಒಪ್ಪಿಕೊಂಡಿದ್ದ. ಆದರೆ ಈಗ ಮಂಪರು ಪರೀಕ್ಷೆ ಬೇಡವೆಂದು ಜೈಲು ಅಧೀಕ್ಷಕರಿಗೆ ಕೂಡ ಪತ್ರ ಬರೆದಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿವೆ. ಇದನ್ನೂ ಓದಿ: ಗೌರಿ ಕೇಸ್ – ಶಂಕಿತ ಆರೋಪಿ ಹೊಟ್ಟೆ ಮಂಜನಿಗೆ ಮಂಪರು ಪರೀಕ್ಷೆ- ಏನಿದು ಪರೀಕ್ಷೆ? ಹೇಗೆ ಮಾಡುತ್ತಾರೆ? ಇಲ್ಲಿದೆ ಪೂರ್ಣ ವಿವರ
Advertisement
Advertisement
ನನಗೆ ಇಷ್ಟ ಇಲ್ಲದಿದ್ದರೂ ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಎಸ್‍ಐಟಿ ಅಧಿಕಾರಿಗಳ ಬೆದರಿಕೆ ಹಿನ್ನೆಲೆ ಮಂಪರು ಪರೀಕ್ಷೆ ನಡೆಸಲು ಒಪ್ಪಿಕೊಂಡಿದ್ದೇನೆ. ನೀನು ಮಂಪರು ಪರೀಕ್ಷೆಗೆ ಒಪ್ಪದಿದ್ರೇ ಬೇಲ್ ಸಿಗದಂತೆ ಮಾಡ್ತೀವಿ ಅಂತ ಎಸ್ ಐಟಿ ಅಧಿಕಾರಿಗಳು ಬೆದರಿಸಿದ್ದಾರೆ. ಹೀಗಾಗಿ ನಾನು ಮಂಪರು ಪರೀಕ್ಷೆಗೆ ಒಪ್ಪಿಕೊಂಡಿದ್ದೆ ಅಂತಾ ನವೀನ್ ಪತ್ರದಲ್ಲಿ ಉಲ್ಲೇಖಿಸಿದ್ದಾನೆ. ಇದನ್ನೂ ಓದಿ: ಗೌರಿ ಹತ್ಯೆ ಕೇಸ್: ಶಂಕಿತ ಆರೋಪಿಯ ಮಂಪರು ಪರೀಕ್ಷೆಗೆ ಭಾಷೆಯ ತೊಡಕು
Advertisement
ಈಗ ನಾನು ತುಂಬಾ ಯೋಚಿಸಿದ್ದು, ಮಂಪರು ಪರೀಕ್ಷೆ ಇಷ್ಟ ಇಲ್ಲ. ಕೂಡಲೇ ಈ ಪತ್ರವನ್ನು 3 ನೇ ಎಸಿಎಂಎಂ ನ್ಯಾಯಾಧೀಶರಿಗೆ ತಲುಪಿಸಿ, ಇದಕ್ಕೆ ನ್ಯಾಯಾಧೀಶರು ಕೂಡಲೇ ಹಿಂದೆ ನೀಡಿದ್ದ ಆದೇಶವನ್ನು ತಡೆ ಹಿಡಿಯಬೇಕು ಅಂತ ಆರೋಪಿ ಮನವಿ ಮಾಡಿದ್ದಾನೆ.