ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಮಾಜಿ ಕಾರ್ಪೋರೇಟರ್ ನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ.
ಶ್ರೀಕಾಂತ್ ಪನ್ಗಾರ್ಕರ್ ಎಂಬಾತನೇ ಬಂಧಿತ ಶಿವಸೇನೆ ಪಕ್ಷದ ಮಾಜಿ ಕಾರ್ಪೋರೇಟರ್. ವಿಚಾರವಾದಿಗಳು ಮತ್ತು ಚಿಂತಕರ ಹತ್ಯೆಗೆ ಶ್ರೀಕಾಂತ್ ಹಣಕಾಸು ಸಹಾಯ ಮಾಡುತ್ತಿದ್ದನು ಎಂಬ ಆರೋಪಗಳಿವೆ. ಹೀಗಾಗಿ ಶ್ರೀಕಾಂತ್ ನನ್ನು ಪುಣೆಯ ಎಸ್‍ಐಟಿ ಪೊಲೀಸರು ಬಂಧಿಸಿ ಮುಂಬೈ ಜೈಲಿನಲ್ಲಿ ಇರಿಸಿದ್ದರು.
Advertisement
Advertisement
ಮುಂಬೈ ಜೈಲಿನಲ್ಲಿದ್ದ ಶ್ರೀಕಾಂತ್ ನನ್ನು ಬಾಡಿ ವಾರೆಂಟ್ ಮೂಲಕ ಬೆಂಗಳೂರಿಗೆ ಕರೆತಂದಿರುವ ಎಸ್‍ಐಟಿ ಇಂದು ಕೋರ್ಟ್ ಗೆ ಹಾಜರುಪಡಿಸಲಿದೆ. ನ್ಯಾಯಾಲಯಕ್ಕೆ ಹಾಜುರುಪಡಿಸಿ ಆರೋಪಿ ಶ್ರೀಕಾಂತ್‍ನ್ನು ಎಸ್‍ಐಟಿ ತಮ್ಮ ವಶಕ್ಕೆ ಪಡೆಯಲಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.
Advertisement
ಇತ್ತ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಹುಬ್ಬಳ್ಳಿಯ ಅಮಿತ್ ಬದ್ದಿ ಮತ್ತು ಗಣೇಶ್ ಮಿಸ್ಕಿನ್ ಇಬ್ಬರನ್ನು ಸಿಐಡಿ ತನ್ನ ವಶಕ್ಕೆ ಪಡೆದುಕೊಂಡಿದೆ. ವಿಚಾರವಾದಿ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ತಮ್ಮ ವಶಕ್ಕೆ ನೀಡಬೇಕೆಂದು ಸಿಐಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಧಾರವಾಡದ 3 ನೇ ಹೆಚ್ಚುವರಿ ದಿವಾನಿ ನ್ಯಾಯಾಲಯ ಆರೋಪಿಗಳನ್ನು ಸೆಪ್ಟೆಂಬರ್ 28ರವರೆಗೆ ಸಿಐಡಿ ವಶಕ್ಕೆ ನೀಡುವಂತೆ ಆದೇಶಿಸಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv