Connect with us

Districts

ಗೌರಿ ಹಂತಕನ ರೇಖಾಚಿತ್ರಕ್ಕೂ ಬಿಜೆಪಿ ಶಾಸಕರ ಪಿಎ ಗೂ ಸಾಮ್ಯತೆ- ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

Published

on

ತುಮಕೂರು: ಗೌರಿ ಲಂಕೇಶ್ ಹಂತಕರ ರೇಖಾಚಿತ್ರವನ್ನು ಎಸ್‍ಐಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ತಿಲಕವಿಟ್ಟುರುವ ಹಂತಕನಿಗೂ ಬಿಜೆಪಿ ಶಾಸಕ ಸುರೇಶ್ ಗೌಡರ ಆಪ್ತ ಸಹಾಯಕ ಪ್ರಭಾಕರ್ ಭಾವಚಿತ್ರಕ್ಕೂ ಸಾಮ್ಯತೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಮೂವರು ಶಂಕಿತ ಹಂತಕರ ರೇಖಾಚಿತ್ರದಲ್ಲಿ ಕುಂಕುಮಧಾರಿಯ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದರು. ಈ ರೇಖಾಚಿತ್ರ ಬಿಜೆಪಿ ಶಾಸಕರ ಆಪ್ತ ಸಹಾಯಕ ಪ್ರಭಾಕರ್ ಭಾವಚಿತ್ರಕ್ಕೆ ಸಾಮ್ಯತೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ಈ ವಿಚಾರವಾಗಿ ಪ್ರಭಾಕರ್‍ಗೆ ಒಂದೇ ಸಮನೆ ಫೋನ್ ಕಾಲ್‍ಗಳು ಬರುತ್ತಿವೆ. ಅಲ್ಲದೆ ಗೌರಿ ಹಂತಕರ ರೇಖಾ ಚಿತ್ರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಕೂಡಾ ಹಣೆಗೆ ಕುಂಕುಮದ ತಿಲಕ ಇಟ್ಟುಕೊಳ್ಳುತ್ತೇನೆ ಹಾಗಾಗಿ ಸಾಮ್ಯತೆ ಕಾಣುತ್ತಿದೆ ಎಂದು ಪ್ರಭಾಕರ್ ತಮ್ಮ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

https://youtu.be/do8TDRmfIFE

https://www.youtube.com/watch?v=9WT11xFPWIc

https://www.youtube.com/watch?v=gMCRfdWRT8w

Click to comment

Leave a Reply

Your email address will not be published. Required fields are marked *