ನವದೆಹಲಿ/ಬೆಂಗಳೂರು: ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಬೆಂಗಳೂರು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳ ಪಟ್ಟಿಯನ್ನು ಸಲ್ಲಿಸಿದ್ದಾರೆ.
ಅರ್ಜಿಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ನ್ಯಾಯಾಲಯ ಜೂನ್ 6ಕ್ಕೆ ವಿಚಾರಣೆ ಮುಂದೂಡಿತ್ತು. ಜುಲೈ 4 ರಿಂದ 8ರ ವರೆಗೆ ಮತ್ತು ಪ್ರತಿ ತಿಂಗಳು ಒಂದು ವಾರದವರೆಗೆ ವಿಚಾರಣೆ ನಡೆಯಲಿದೆ. 2017ರ ಸೆಪ್ಟಂಬರ್ 5ರಂದು ಗೌರಿ ಲಂಕೇಶ್ ಅವರನ್ನು ನಗರದ ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ನಿವಾಸದ ಹೊರಗೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಇದನ್ನೂ ಓದಿ: ಒಂದೇ ಒಂದು ಪಿಸ್ತೂಲಿನಿಂದ ದಾಬೋಲ್ಕರ್, ಕಲ್ಬುರ್ಗಿ, ಗೌರಿ ಹತ್ಯೆ!
ಹತ್ಯೆಯ ಕ್ಷಣದಲ್ಲಿ ಏನೇನಾಯ್ತು? – ಸೆಪ್ಟಂಬರ್ 5 ರಂದು ಕಚೇರಿಯಿಂದ ಮನೆಗೆ ಬಂದ ಗೌರಿ ಅವರು ಕಾರು ನಿಲ್ಲಿಸಿ ಗೇಟ್ ತೆಗೆದು ಒಳಗಡೆ ಹೊರಟ್ಟಿದ್ದರು. ಈ ವೇಳೆ ಗೌರಿ ತಲೆಗೆ ಹಿಂಬದಿಯಿಂದ ಫೈರ್ ಮಾಡಲು ಹಂತಕ ರೆಡಿಯಾಗಿದ್ದನು. ಹಿಂದೆ ಯಾರೋ ಬಂದಿದ್ದಾರೆಂದು ಗೊತ್ತಾದ ಕೂಡಲೇ ಗೌರಿ ಹಿಂದಿರುಗಿ ಹಂತಕನನ್ನು ನೋಡಿದ್ದಾರೆ. ಕೂಡಲೇ ಯಾರು? ಯಾರು ನೀನು? ಅಂತ ಗಾಬರಿಯಿಂದ ಗೌರಿ ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆಗೆ ತಬ್ಬಿಬ್ಬಾದ ಹಂತಕ ತಕ್ಷಣ ಕೈಯಲ್ಲಿದ್ದ ರಿವಾಲ್ವರ್ ಮೂಲಕ ತಲೆಗೆ ಗುಂಡು ಹೊಡೆಯಲು ಫೈರ್ ಮಾಡಿದ್ದ, ಆದ್ರೆ ಅದು ಗುರಿ ತಪ್ಪಿ ಗೋಡೆಗೆ ಸಿಡಿದಿತ್ತು. ಇದನ್ನೂ ಓದಿ: ನಡು ರಸ್ತೆಯಲ್ಲೇ ಮಾರಕಾಸ್ತ್ರದಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ
ಗೌರಿ ತಪ್ಪಿಸಿಕೊಳ್ತಾರೆ ಅಂತ ಗೊತ್ತಾದಾಗ ಹಂತಕ, ಕ್ಷಣಾರ್ಧದಲ್ಲಿ ಟಾರ್ಗೆಟ್ ಚೇಂಜ್ ಮಾಡಿ, ತಲೆಗೆ ಗುಂಡು ಹೊಡೆಯುವ ಬದಲು, ಹೊಟ್ಟೆ ಮತ್ತು ಎದೆಯ ಭಾಗಕ್ಕೆ ನಾಲ್ಕು ಗುಂಡು ಹೊಡೆದಿದ್ದಾನೆ. ಕೊನೆಯ ಗುಂಡು ಮತ್ತೆ ಗುರಿ ತಪ್ಪಿತ್ತು. ಅಷ್ಟರಲ್ಲಿ ಪತ್ರಕರ್ತೆ ಗೌರಿಯವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಹಂತಕ ಸಿಡಿಸಿದ ಮೂರನೇ ಗುಂಡು ನೇರವಾಗಿ ಎದೆಗೆ ನುಗ್ಗಿ ಹೃದಯವನ್ನೇ ಹೊಕ್ಕಿತ್ತು.