ಬೆಂಗಳೂರು: ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶದಲ್ಲಿ `ನಾನು ಅರ್ಬನ್ ನಕ್ಸಲ್’ ಎಂದು ಕುತ್ತಿಗೆಗೆ ಬೋರ್ಡ್ ಹಾಕಿಕೊಂಡು ಬಂದಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ.
ಫೇಸ್‍ಬುಕ್‍ನಲ್ಲಿ ಗಿರೀಶ್ ಕಾರ್ನಾಡ್‍ರನ್ನು ಗಂಜಿ ಗಿರಾಕಿ ಎಂದು ನಿಂದಿಸಿ, ಸದ್ಯದಲ್ಲೇ ಹಾರ ಹಾಕಿಸಿಕೊಳ್ಳೋ ಕಾಲ ಹತ್ತಿರ ಇದೆ ಎಂದು ಕೆಲವರು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ, ಅರ್ಬನ್ ನಕ್ಸಲೇಟ್ ಬಳಿ ಇರುವ ಪ್ರಶಸ್ತಿಯನ್ನು ವಾಪಸ್ ಪಡೆಯಿರಿ ಎಂದು ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಸಾಮಾಜಿಕ ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಬುಧವಾರಕ್ಕೆ ಒಂದು ವರ್ಷ. ಕಳೆದ ವರ್ಷದ ಸೆ.5ರ ರಾತ್ರಿ 8 ಗಂಟೆಯೊಷ್ಟಿತ್ತಿಗೆ ಬೈಕ್‍ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮನೆ ಎದುರೇ ಗುಂಡಿಕ್ಕಿ ಕಗ್ಗೊಲೆಗೈದಿದ್ರು. ಬುಧವಾರ ಗೌರಿ ಸಮಾಧಿಗೆ ಹೋಗಿ ಪುಷ್ಪಾಂಜಲಿ ಸಲ್ಲಿಸಿದ್ದ ಹೋರಾಟಗಾರರು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಾದ ಹಲ್ಲೆ ಅಂತ ಘೋಷಿಸಿ ಮೌರ್ಯ ಸರ್ಕಲ್‍ನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದರು.
Advertisement
ಸ್ವಾಮಿ ಅಗ್ನಿವೇಶ್, ಕನ್ನಯ್ಯ , ಪ್ರೊ.ಭಗವಾನ್ ಸೇರಿದಂತೆ ಅನೇಕ ಎಡಪಂಥೀಯ ಹೋರಾಟಗಾರರು ಗೌರಿ ದಿನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸನಾತನ ಸಂಸ್ಥೆಯನ್ನು ಪ್ರಧಾನಿ ಭಯೋತ್ಪಾದಕ ಸಂಸ್ಥೆಯೆಂದು ಘೋಷಿಸಲಿ. ಮೋದಿ ವಿಚಾರವಾದಿಗಳನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಮೋದಿ ಮೊದಲು ಕುರ್ಚಿ ಬಿಟ್ಟು ಇಳಿಯಬೇಕು ಅಂತಾ ಸಾಮೂಹಿಕವಾಗಿ ಆಕ್ರೋಶ ವ್ಯಕ್ತಪಡಿಸಿದರು.
Advertisement
ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಾದ ನಡೆಸಲಾಯಿತು. ಈ ವೇಳೆ ಪ್ರಧಾನಿ ಮೋದಿ ಗೌರಿ ಹತ್ಯೆಯ ವಿಚಾರದಲ್ಲಿ ಮೌನವಹಿಸಿದ್ದಾರೆ. ಮುಂದೆ ಯಾರ ಹತ್ಯೆಗೆ ಇವರೆಲ್ಲ ಸಂಚು ರೂಪಿಸುತ್ತಿದ್ದಾರೆ ಅಂತಾ ಕಿಡಿಕಾರಿದ್ರು. ಎಸ್‍ಐಟಿ ತನಿಖೆಯಿಂದ ಸನಾತನ ಸಂಸ್ಥೆಯ ಕರಾಳ ಮುಖ ಬಯಲಾಗಿದೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv