ಲಕ್ನೋ: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಅಮೋಘ ಸಾಧನೆ ಮೂಡಿ ಬಂದ ಹಿನ್ನೆಲೆಯಲ್ಲಿ ಭಾರತದ ಮೊದಲ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ ಸ್ಥಾಪನೆಗೊಂಡಿದೆ. ಭಾರತ ರಾಷ್ಟ್ರೀಯ ತಂಡದ ಪ್ರಧಾನ ಕೋಚ್ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಗೌರವ್ ಖನ್ನಾ, ಖಾಸಗಿ ಸಂಸ್ಥೆಯೊಂದರ ಜೊತೆ ಕೈಜೋಡಿಸಿ ಈ ಅಕಾಡೆಮಿ ಪ್ರಾರಂಭಿಸಿದ್ದಾರೆ.
ಈ ಬಗ್ಗೆ ಗೌರವ್ ಖನ್ನಾ ಮಾತನಾಡಿ, 2024ರ ಪ್ಯಾರಾಲಿಂಪಿಕ್ಸ್‌ಗೆ ಭಾರತೀಯ ಶಟ್ಲರ್‌ಗಳ ಪ್ರದರ್ಶನ ಗುಣಮಟ್ಟವನ್ನು ಹೆಚ್ಚಿಸಲು ಈ ಅಕಾಡಮಿಯನ್ನು ಬಳಸಿಕೊಳ್ಳಲಾಗುತ್ತದೆ. 2028, 2023ರ ಒಲಂಪಿಕ್ಸ್‌ಗೆ ಹೊಸ ಪ್ರತಿಭೆಗಳನ್ನು ಹುಡುಕಿ, ಈ ಅಕಾಡೆಮಿಯಲ್ಲಿ ತರಬೇತಿ ನೀಡಲಾಗುತ್ತದೆ ಎಂದರು.
Advertisement
Advertisement
ಭಾರತದಲ್ಲಿ ಹಲವಾರು ಪ್ಯಾರಾ ಚಾಂಪಿಯನ್‍ಗಳಿದ್ದಾರೆ. ಆದರೆ ಅವರು ಎಂದಿಗೂ ವೃತ್ತಿಪರ ಸೆಟಪ್‍ನಲ್ಲಿ ತರಬೇತಿ ಪಡೆದಿರಲಿಲ್ಲ. 2015ರಿಂದ ನಾನು ತಾತ್ಕಾಲಿಕವಾಗಿ ಬಾಡಿಗೆ ಸ್ಥಳಗಳಲ್ಲಿ ತರಬೇತಿ ಪಡೆಯುತ್ತಿದ್ದೆ. ಇದಕ್ಕಾಗಿಯೇ ಅಕಾಡೆಮಿಯನ್ನು ಪ್ರಾರಂಭಿಸಿದ್ದೇನೆ ಎಂದು ಹೇಳಿದರು.
Advertisement
ಇಲ್ಲಿ ನಾವು ಪ್ಯಾರಾ-ಬ್ಯಾಡ್ಮಿಂಟನ್ ಆಟಗಾರರಿಗಾಗಿ ವಿಶ್ವ ದರ್ಜೆಯ ಸೌಲಭ್ಯವನ್ನು ನೀಡಿದ್ದೇವೆ. ಇಲ್ಲಿ ತರಬೇತಿ ನೀಡುವುದು ಮಾತ್ರವಲ್ಲದೆ ಅವರ ಆಟದ ಮೇಲೆ ಸಂಪೂರ್ಣವಾಗಿ ಗಮನ ಹರಿಸಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಲಡಾಖ್‌ನಲ್ಲಿ ಚೀನಾದಿಂದ ಪ್ಯಾಂಗ್ಯಾಂಗ್ ಸೇತುವೆ ನಿರ್ಮಾಣ – ಮೋದಿ ವಿರುದ್ಧ ರಾಹುಲ್ ವಾಗ್ದಾಳಿ
Advertisement
ಈ ಉನ್ನತ ಪ್ರದರ್ಶನ ಕೇಂದ್ರದಲ್ಲಿ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್) ಮಾನದಂಡದ ಅನ್ವಯ ನಿಂತು ಆಡಲು ಶಟ್ಲರ್‌ಗಳ ಅಭ್ಯಾಸಕ್ಕೆ 2 ಸಿಂಥೆಟಿಕ್ ಮ್ಯಾಟ್ಸ್‍ಗಳನ್ನು ಒಳಗೊಂಡ ಅಂಕಣ, ವೀಲ್ಹ್ ಚೇರ್ ಬಳಸಿ ಆಡುವ ಶಟ್ಲರ್‌ಗಳ ಅಭ್ಯಾಸಕ್ಕೆ 2 ಮರದ ಹಾಸಿನ ಅಂಕಣಗಳನ್ನು ಸಿದ್ಧಗೊಳಿಸಲಾಗಿದೆ. ಜಿಮ್ ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಅಕಾಡೆಮಿ ಒಳಗೊಂಡಿದೆ. ಇದನ್ನೂ ಓದಿ: ಮಹಾರಾಷ್ಟ್ರ ನಗರ ಪಂಚಾಯತ್ ಚುನಾವಣಾ ಫಲಿತಾಂಶ – ಬಿಜೆಪಿ ಅತಿ ದೊಡ್ಡ ಪಕ್ಷ
ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪ್ರಮೋದ್ ಭಗತ್ ಮತ್ತು ಕೃಷ್ಣನಗರ ಸಿಂಗಲ್ಸ್‍ನಲ್ಲಿ ಚಿನ್ನದ ಪದಕ ಹಾಗೂ ಸುಹಾಸ್ ಯತಿರಾಜ್ ಮತ್ತು ಮನೋಜ್ ಸರ್ಕಾರ್ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದರು.