ಬೆಂಗಳೂರು: ತಪ್ಪು ಮಾಡಿಯೂ ತಪ್ಪೇ ಮಾಡಿಲ್ಲ ಎಂಬಂತೆ ಗಟ್ಟಿಮೇಳ ಸೀರಿಯಲ್ ಖ್ಯಾತಿಯ ರಕ್ಷಿತ್ ಸುಳ್ಳು ಹೇಳುತ್ತಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Advertisement
ನಾವು ತಪ್ಪು ಮಾಡಿಲ್ಲ. ನಮ್ಮ ಮೇಲೆ ಎಫ್‌ಐಆರ್ ಆಗಿಲ್ಲ. ಮಾಧ್ಯಮಗಳು ನಮ್ಮ ಮೇಲೆ ಸುಳ್ಳು ಸುದ್ದಿ ಪ್ರಸಾರ ಮಾಡಿವೆ ಎಂದು ರಕ್ಷಿತ್ ಸಿನಿಮಾ ಡೈಲಾಗ್ ಹೊಡೆದಿದ್ದಾರೆ. ಆದರೆ ಶುಕ್ರವಾರ ರಾತ್ರಿ ರಕ್ಷಿತ್ ಮತ್ತು ಗ್ಯಾಂಗ್ ಕೋವಿಡ್ ನೈಟ್ ಕಾರ್ಫ್‌ಯೂ ಮಾರ್ಗಸೂಚಿಯನ್ನು ಉಲ್ಲಂಘಿಸಿ ಪಕ್ಷಕ್ಕೆ ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ವಿವಿಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಕೆಂಗೇರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ, ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಯಾವೆಲ್ಲ ಸೆಕ್ಷನ್?
ಕೆಂಗೇರಿ ಠಾಣೆಯ ಎಸ್‌ಐ ನಾಗರಾಜ್ ಅವರು ನೀಡಿದ ದೂರಿನ ಮೇರೆಗೆ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಐಪಿಸಿ ಸೆಕ್ಷನ್ 143(ಕಾನೂಬಾಹಿರ ಸಭೆ), 147(ಗಲಾಟೆ),188(ಸರ್ಕಾರದ ಆದೇಶ ಉಲ್ಲಂಘಿಸಿ ಅವಿಧೇಯ ವರ್ತನೆ), 269(ನಿರ್ಲಕ್ಷ್ಯದಿಂದ ಜೀವಕ್ಕೆ ಅಪಾಯಕಾರಿಯಾದ ಕಾಯಿಲೆ ಸೋಂಕನ್ನು ಹರಡುವುದು) ಅಡಿ ರಕ್ಷಿತ್ ವಿರುದ್ಧ 6 ಎಫ್. ಸೇರಿದೆ. ಇದನ್ನೂ ಓದಿ: ಗಟ್ಟಿಮೇಳ ಸೀರಿಯಲ್ ಖ್ಯಾತಿಯ ನಟ ರಕ್ಷಿತ್ ಆಯಂಡ್ ಗ್ಯಾಂಗ್‌ನಿಂದ ರಂಪಾಟ
Advertisement
ಯಾರೆಲ್ಲ ಆರೋಪಿಗಳು?
ರಕ್ಷಿತ್(ಎ1), ಅಭಿಷೇಕ್(ಎ2), ರಂಜನ್(ಎ3), ರಾಕೇಶ್ ಕುಮಾರ್(ಎ4), ರವಿಚಂದ್ರನ್(ಎ5), ಅನುಷಾ(ಎ6), ಶರಣ್ಯಾ(ಎ7) ಆರೋಪಿಗಳಾಗಿದ್ದಾರೆ.
ದೂರಿನಲ್ಲಿ ಏನಿದೆ?
ಶುಕ್ರವಾರ ರಾತ್ರಿ ನಾವು ಮಧ್ಯರಾತ್ರಿ1:35ಕ್ಕೆ ಜಿಂಜರ್ ಲೇಕ್ ವ್ಯೂನಲ್ಲಿ ಕುಡಿದು ಯಾರೋ ಗಲಾಟೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಠಾಣೆಗೆ ಕರೆ ಮಾಡಿ ತಿಳಿಸಿದ್ದರು. ಈ ಕರೆಯ ಸ್ಥಳಕ್ಕೆ ತೆರಳಿದಾಗ ಹೋಟೆಲ್‌ನಲ್ಲಿ 5 ಮಂದಿ ಪುರುಷರು ಮತ್ತು ಇಬ್ಬರು ಮಹಿಳೆಯರು ಜೋರಾಗಿ ಗಲಾಟೆ ಮಾಡಿ ಶಾಂತಿ ಭಂಗ ಮಾಡುತ್ತಿರುವುದು ತಿಳಿದು ಬಂದಿದೆ.
ಈ ವೇಳೆ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದ್ದು ಸ್ಥಳದಿಂದ ತೆರಳುವಂತೆ ಸೂಚಿಸಿದಾಗ ಏರು ಧ್ವನಿಯಲ್ಲಿ ನಮ್ಮೊಂದಿಗೆ ಮಾತನಾಡುವ ಸ್ಥಳದಿಂದ ತೆರಳಲು ನಿರಾಕರಿಸಲಾಗಿದೆ. ಕೂಡಲೇ ಅವರನ್ನು ಹೊಯ್ಸಳ ಸಿಬ್ಬಂದಿ ಮೂಲಕ ಠಾಣೆಗೆ ಕರೆ ತರಲಾಗಿದೆ. ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದಕ್ಕೆ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಈ ಮೂಲಕ ದೂರು ನೀಡಲಾಗಿದೆ.