ಕಿರುತೆರೆಯ ಮತ್ತೊಂದು ಜೋಡಿ ಇದೀಗ ಹಸೆಮಣೆ ಏರಿದ್ದಾರೆ. `ಗಟ್ಟಿಮೇಳ’ (Gattimela) ನಟಿ ಪ್ರಿಯಾ ಆಚಾರ್ (Priya Achar) ಮತ್ತು `ಪಾರು’ (Paaru) ನಟ ಸಿದ್ದು ಮೂಲಿಮನಿ (Siddu Moolimani) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Advertisement
ಚಿತ್ರರಂಗದಲ್ಲಿ ಗಟ್ಟಿಮೇಳದ ಸೌಂಡ್ ಜೋರಾಗಿದೆ. `ಪಾರು’ ಹೀರೋ ಶರತ್ ಪದ್ಮನಾಭ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆನ್ನಲ್ಲೇ ಕಿರುತೆರೆಯ ಮತ್ತೊಂದು ಹಸೆಮಣೆ ಏರುವ ಮೂಲಕ ಜೋಡಿ ಸಿಹಿಸುದ್ದಿ ಕೊಟ್ಟಿದ್ದಾರೆ. ಇದನ್ನೂ ಓದಿ: ಆನಂದ್ ಮಹಿಂದ್ರಾ ಜೊತೆ `ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ರಾಮ್ ಚರಣ್
Advertisement
View this post on Instagram
Advertisement
ಹಲವು ವರ್ಷಗಳ ಪ್ರೀತಿಗೆ ಇದೀಗ ಸಿದ್ದು-ಪ್ರಿಯಾ ಮದುವೆಯೆಂಬ (Wedding) ಮುದ್ರೆ ಒತ್ತಿದ್ದಾರೆ. ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಭಾನುವಾರ (ಫೆ.12)ರಂದು ಪಾರು ನಟ ಸಿದ್ದು- ʻಗಟ್ಟಿಮೇಳʼ ಖ್ಯಾತಿಯ ನಟಿ ಪ್ರಿಯಾ ಆಚಾರ್ ಹಸೆಮಣೆ ಏರಿದ್ದಾರೆ. ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಈ ಜೋಡಿ ಮದುವೆಯಾಗಿದ್ದಾರೆ. ಈ ಮದುವೆ ಸಂಭ್ರಮಕ್ಕೆ `ಗಟ್ಟಿಮೇಳ’ ಮತ್ತು `ಪಾರು’ ಸೀರಿಯಲ್ ತಂಡ ಸಾಕ್ಷಿಯಾಗಿದೆ.
Advertisement
View this post on Instagram
ಫೆ.12ರಂದು ಮದುವೆಯಾಗಿರುವ ಈ ಜೋಡಿ, ಇದೀಗ ಫೆ.14ರಂದು ದಾವಣಗೆರೆಯಲ್ಲಿ ಆರತಕ್ಷತೆ ಹಮ್ಮಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k