ಬೆಂಗಳೂರು: ಇನ್ನು ಮುಂದೆ ಕಬ್ಬನ್ ಪಾರ್ಕ್‌ನಲ್ಲಿ (Cubbon Park) ನಡೆಯುವ ಯಾವುದೇ ಗುಂಪು ಚಟುವಟಿಕೆಗಳಿಗೆ ತೋಟಗಾರಿಕಾ ಇಲಾಖೆ (Horticulture Department) ಮತ್ತು ಪೊಲೀಸ್ ಇಲಾಖೆಯ (Police Department) ಅನುಮತಿ ಅಗತ್ಯ.
ಅನುಮತಿ ಇಲ್ಲದೇ ಕಬ್ಬನ್ ಪಾರ್ಕ್‌ನಲ್ಲಿ ಸಂಘಟನೆಗಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದು ಇದು ಅಲ್ಲಿಗೆ ಬರುವ ಜನರಿಗೆ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಈಗ ಕಬ್ಬನ್ ಪಾರ್ಕ್ ಆಡಳಿತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
20 ಜನರನ್ನು ಮೀರುವ ಕೂಟಗಳಿಗೆ ಮುಂಗಡ ಅನುಮೋದನೆಯ ಅಗತ್ಯವಿದೆ. ತೋಟಗಾರಿಕೆ ಇಲಾಖೆಯಿಂದ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಪೊಲೀಸ್ ಇಲಾಖೆಯ ಅನುಮತಿಯನ್ನು ಪಡೆಯಬೇಕು. ಇದನ್ನೂ ಓದಿ: ಅಮಿತ್ ಶಾ ಫೇಕ್ ಎನ್‍ಕೌಂಟರ್‌ಗೆ ಹೆಸರುವಾಸಿ: ಜೋಶಿ ವಿರುದ್ಧ ಹರಿಪ್ರಸಾದ್ ಕಿಡಿ
ಯಾಕೆ ಈ ಮಾರ್ಗಸೂಚಿ?
ಶನಿವಾರ ಕಬ್ಬನ್ ಪಾರ್ಕ್‌ನಲ್ಲಿ ಪೂರ್ವಾನುಮತಿ ಇಲ್ಲದೆ ಸೀಕ್ರೇಟ್ ಸಂತ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಸಾವಿರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗದ್ದಲ ಉಂಟು ಮಾಡಿದ್ದಾರೆ ಎಂಬ ದೂರು ಬಂದಿತ್ತು.
ಇತ್ತೀಚಿನ ದಿನಗಳಲ್ಲಿ ಕಬ್ಬನ್ ಪಾರ್ಕ್‌ಗೆ ಬರುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ವೀಕೆಂಡ್‌ನಲ್ಲಿ ಇಲ್ಲಿ ಹಲವು ಪುಸ್ತಕ ಪ್ರೇಮಿಗಳು, ಸಾಹಿತ್ಯ ಆಸಕ್ತರು ಸಣ್ಣ ಸಣ್ಣ ಗುಂಪುಗಳೊಂದಿಗೆ ಬರುತ್ತಿದ್ದಾರೆ. ಆದರೆ ಈಗ 20ಕ್ಕೂ ಹೆಚ್ಚು ಜನರು ಇರುವ ಗುಂಪುಗಳು ಹೆಚ್ಚಾಗಿದ್ದು ಗದ್ದಲವನ್ನು ಸೃಷ್ಟಿಸುತ್ತಿದ್ದಾರೆ. ಈ ಕಾರಣಕ್ಕೆ ಈಗ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.