ಗ್ಯಾಸ್ಟ್ರಿಕ್ ಸರ್ವೆ ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಾಣುವ ಸಮಸ್ಯೆಯಾಗಿದೆ. ಪ್ರತಿ ಬಾರಿ ಗ್ಯಾಸ್ಟ್ರಿಕ್ ಉಂಟಾದಾಗಲೂ ಮೆಡಿಕಲ್‍ನಿಂದ ಮಾತ್ರೆ ತಂದು ನುಂಗುವುದು, ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ನೀವು ಮನೆ ಮದ್ದನ್ನು ಮಾಡಿ ಸೇವನೆ ಮಾಡಬಹುದು.
* ತಂಪಾಗಿರುವ ಹಾಲು ಕುಡಿಯುವುದರಿಂದ ಗ್ಯಾಸ್ಟ್ರಿಕ್ ಆದಾಗ ಎದೆಯಲ್ಲಿ ಉಂಟಾಗುವ ಉರಿ ಮತ್ತು ಹುಳಿ ತೇಗು ಸಮಸ್ಯೆ ಬಹಳ ಬೇಗನೆ ನಿವಾರಣೆ ಆಗುತ್ತದೆ.
Advertisement
Advertisement
* ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಉಗುರು ಬೆಚ್ಚಗಾಗಿಸಲು ಸಾಧ್ಯವಿಲ್ಲದಿದ್ದರೆ ತಣ್ಣೀರೂ ಸರಿ ಅರ್ಧ ಚಿಕ್ಕ ಚಮಚ ಇಂಗು ಹಾಕಿ ಕುಡಿದು ಬಿಡಬೇಕು.
Advertisement
Advertisement
* ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 4 ರಿಂದ 5 ತುಳಸಿ ಎಲೆಗಳನ್ನು ಜಗಿದು ತಿನ್ನುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರ ಇರಬಹುದಾಗಿದೆ.
* ಸೋಂಪು ಕಾಳುಗಳು ಚಹಾ ತಯಾರು ಮಾಡಿ ಸೇವನೆ ಮಾಡಬಹುದು. ಇದರಿಂದ ನಿಮ್ಮ ಜಠರ ನಾಳ ಆರೋಗ್ಯಕರವಾಗಿದ್ದು ನಿಮಗೆ ಅಜೀರ್ಣತೆ ಮತ್ತು ಹೊಟ್ಟೆ ಉಬ್ಬರ ಸಮಸ್ಯೆ ಇಲ್ಲವಾಗುತ್ತದೆ.
* ದಿನಕ್ಕೊಂದು ಬಾಳೆಹಣ್ಣು ಸೇವನೆ ಮಾಡಿ.
* ಬಿಸಿ ನೀರನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಬೇಕು