– ಕೆಲವೆಡೆ ಸೌದೆ ಒಲೆ ಅಡುಗೆ; ದೋಸೆ, ಕೈಮಾ, ಕಬಾಬ್ ಕಟ್ – ಇಡ್ಲಿ, ಸೂಪ್, ಬಿರಿಯಾನಿ ಮಾತ್ರ ಲಭ್ಯ
– ಹಲವೆಡೆ ಮುಚ್ಚಿದ ಹೋಟೆಲ್‌ಗಳು
ಬೆಂಗಳೂರು: ಬಿಸಿನೆಸ್ ಡೇ ಸಂಡೇ ಕೂಡ ಸಿಲಿಂಡರ್ ಸಮಸ್ಯೆ ತೀವ್ರಗೊಂಡಿದೆ. ನಾನ್‌ವೆಜ್ ಹೋಟೆಲ್‌ಗಳಿಗೆ ಭಾರಿ ಹೊಡೆತ ಬಿದ್ದಿದೆ. ಹಲವೆಡೆ ಹೋಟೆಲ್‌ಗಳು ಬಂದ್ ಆಗಿವೆ. ಇನ್ನೂ ಕೆಲವೆಡೆ ಸೌದೆ ಒಲೆ ಅಡುಗೆ ಮಾಡಲಾಗುತ್ತಿದ್ದರೂ, ಕೆಲ ಐಟಂಗಳಿಗಷ್ಟೇ ಸೀಮಿತವಾಗಿದೆ.
ರಾಜಾಜಿನಗರದಲ್ಲಿ ಹಲವು ಹೋಟೆಲ್‌ಗಳು ಬಂದ್ ಆಗಿವೆ. ಭಾನುವಾರ ವ್ಯಾಪಾರ ದಿನವೂ ಸಿಲಿಂಡರ್ ಸಿಗದೇ ಕ್ಲೋಸ್ ಮಾಡಲಾಗಿದೆ. ರಾಜಣ್ಣ ಮಿಲ್ಟ್ರಿ ಹೋಟೆಲ್‌ಗೂ ಇದರ ಎಫೆಕ್ಟ್ ತಟ್ಟಿದ್ದು, ಮೆನುವಿನಲ್ಲೂ ಕಡಿತ ಮಾಡಲಾಗಿದೆ.
ಸಿಲಿಂಡರ್ ಅಭಾವದಿಂದ ದೋಸೆ, ಚಪಾತಿ, ಪರೋಟಾ, ಕೈಮಾ, ಕಬಾಬ್‌ನಂತಹ ಐಟಂಗಳನ್ನು ಕಟ್ ಮಾಡಲಾಗಿದೆ. ಇಡ್ಲಿ, ಸೂಪ್, ಬಿರಿಯಾನಿ ಮಾತ್ರ ತಯಾರಿಸಲಾಗುತ್ತಿದೆ. ಹೋಟೆಲ್‌ಗಳಲ್ಲಿ ಭರ್ಜರಿ ಬಾಡೂಟ ಸವಿಯುವ ಆಸೆಯ ಗ್ರಾಹಕರಿಗೆ ನಿರಾಸೆಯಾಗಿದೆ.
ಕೆಲ ನಾನ್‌ವೆಜ್ ಹೋಟೆಲ್‌ಗಳಲ್ಲಿ ಸೌದೆ ಒಲೆಯಲ್ಲಿ ಅಡುಗೆ ಮಾಡಲಾಗುತ್ತಿದೆ. ಇಡ್ಲಿ, ಕಾಲು ಸೂಪ್, ಬಿರಿಯಾನಿಗಷ್ಟೇ ಮೆನುವನ್ನು ಸೀಮಿತ ಮಾಡಲಾಗಿದೆ. ಮತ್ತೊಂದಷ್ಟು ಐಟಂಗಳಿಗೆ ಕೊಕ್ ನೀಡಲಾಗಿದೆ.
ಕೆಲ ಏಜೆನ್ಸಿಗಳಿಂದ ನಾಲ್ಕೈದು ದಿನಕ್ಕೊಮ್ಮೆ ಗ್ಯಾಸ್ ಪೂರೈಕೆ ಆಗುತ್ತಿದೆ. ಪೂರೈಕೆಯಾದ ಕೆಲವೇ ಸಿಲಿಂಡರ್‌ಗಳಿಂದ ಹೋಟೆಲ್ ಕಾರ್ಯಾಚರಣೆ ಮಾಡುತ್ತಿವೆ.

