ಅಮರಾವತಿ: ಔಷಧಿ ಅಂಗಡಿಯೊಂದರಲ್ಲಿ (Pharmacy) ಅನಿಲ ಸೋರಿಕೆಯಾಗಿ (Gas Leakage) ಭೀಕರ ಸ್ಫೋಟ (Explosion) ಸಂಭವಿಸಿ ನಾಲ್ವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣಂನಲ್ಲಿ (Visakhapatnam) ನಡೆದಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯಗಳಾಗಿವೆ.
ವಿಶಾಖಪಟ್ಟಣಂ ಸಮೀಪದ ಅನಕಪಲ್ಲಿ ಜಿಲ್ಲೆಯ ಜವಾಹರಲಾಲ್ ನೆಹರು ಫಾರ್ಮಸಿಯಲ್ಲಿ ಸೋಮವಾರ ಈ ಭೀಕರ ಘಟನೆ ನಡೆದಿದೆ. ಸಂಜೆ 3 ಗಂಟೆ ವೇಳೆಗೆ ಫಾರ್ಮಸಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಔಷಧ ಅಂಗಡಿಯಲ್ಲಿದ್ದ ಕೆಲಸಗಾರರು ಬೆಂಕಿಯನ್ನು ತಡೆಯಲು ಪ್ರಯತ್ನಿಸಿದ್ದರು. ಆದರೆ ಅನಿಲ ಸೋರಿಕೆ ಹಿನ್ನೆಲೆ ಭೀಕರ ಸ್ಫೋಟ ಸಂಭವಿಸಿದೆ. ಇದನ್ನೂ ಓದಿ: ಮಗಳ ಅಶ್ಲೀಲ ವೀಡಿಯೋ ಪೋಸ್ಟ್ ಮಾಡಿದ್ದನ್ನು ಖಂಡಿಸಿದ್ದಕ್ಕೆ ಯೋಧನ ಹತ್ಯೆ
ಔಷಧಾಲಯದ ಆಡಳಿತದ ಪ್ರಕಾರ, ವಿಶಾಖಪಟ್ಟಣಂನ ಫಾರ್ಮಾ ಸಿಟಿಯಲ್ಲಿರುವ ಲಾರಸ್ ಕಂಪನಿಯ ಯುನಿಟ್-3ರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಸಂಭವಿಸಿದೆ. ಸ್ಫೋಟ ಉಂಟಾದ ಬಳಿಕ ಅಗ್ನಿಶಾಮಕ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ ಎಂದು ತಿಳಿಸಿದೆ.
ಮೃತರನ್ನು ಖಮ್ಮಂ ಮೂಲದ ಬಿ ರಾಂಬಾಬು, ಗುಂಟೂರಿನ ರಾಜೇಪ್ ಬಾಬು, ಕೋಟಪಾಡುವಿನ ಆರ್ ರಾಮಕೃಷ್ಣ ಮತ್ತು ಚೋಡಾವರಂನ ಮಜ್ಜಿ ವೆಂಕಟರಾವ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಸತೀಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಭೀಕರ ಸುನಾಮಿಗೆ 60 ಮಂದಿ ಬಲಿ – 15 ಸಾವಿರ ವಿಮಾನಗಳ ಸಂಚಾರ ರದ್ದು