ನವದೆಹಲಿ: ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಗಾಗಿ (Delhi Assembly Election) ಕಾಂಗ್ರೆಸ್ (Congress) ಪಕ್ಷ ಮತ್ತೆರೆಡು ಗ್ಯಾರಂಟಿಗಳನ್ನ ಘೋಷಣೆ ಮಾಡಿದೆ.ಇದನ್ನೂ ಓದಿ: ಯಕ್ಷಗಾನದ ಟೆಂಟ್‌ಗೆ ನುಗ್ಗಿದ ಪೊಲೀಸರು – ಈಗ ಕಾಂಗ್ರೆಸ್ Vs ಬಿಜೆಪಿ ಜಟಾಪಟಿ
‘महंगाई से राहत के लिए दिल्ली वासियों को कांग्रेस की सौगात’
आज माननीय मुख्यमंत्री तेलंगाना श्री @revanth_anumula जी ने दिल्लीवासियों के लिए महंगाई मुक्ति योजना और फ्री बिजली योजना का ऐलान किया।
दिल्ली में कांग्रेस सरकार बनने पर इन योजनाओं के तहत 500 रुपयों में सिलिन्डर और राशन… pic.twitter.com/lJHl6VCwSg
— Delhi Congress (@INCDelhi) January 16, 2025
ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಫೆ.5 ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೆಹಲಿ ನಿವಾಸಿಗಳಿಗೆ ಗ್ಯಾರಂಟಿ ಯೋಜನೆಯನ್ನು ಘೋಷಿಸಿದ್ದು, ಈ ಮೂಲಕ 500 ರೂ. ಎಲ್‌ಪಿಜಿ ಸಿಲಿಂಡರ್, ಉಚಿತ ಪಡಿತರ ಕಿಟ್ ಮತ್ತು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುವುದು. ಜೊತೆಗೆ ಕಾಂಗ್ರೆಸ್ ತನ್ನ ಐದು ಭರವಸೆಗಳನ್ನು ಪೂರೈಸುತ್ತದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ `ಜೀವನ್ ರಕ್ಷಾ’ ಹೆಸರಿನಲ್ಲಿ 25 ಲಕ್ಷ ರೂ. ವಿಮೆ, `ಪ್ಯಾರಿ ದೀದಿ’ ಯೋಜನೆಯಡಿ 2,500 ರೂ. ನೀಡುವ ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಣೆ ಮಾಡಿದ್ದರು. ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ `ಪ್ಯಾರಿ ದೀದಿ’ ಯೋಜನೆಯನ್ನು ಘೋಷಿಸಿದ್ದರು. ಅಲ್ಲದೇ ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು.ಇದನ್ನೂ ಓದಿ: ಸತತ ಸೋಲಿನ ಬಳಿಕ ಬಿಸಿ ಮುಟ್ಟಿಸಿದ ಬಿಸಿಸಿಐ – ಟೀಂ ಇಂಡಿಯಾ ಆಟಗಾರರಿಗೆ ಮತ್ತೊಂದು ಟಫ್ ರೂಲ್ಸ್