ಬೆಂಗಳೂರು(ಆನೇಕಲ್): ಕಾರ್ಮಿಕರು ಬೆಳಿಗ್ಗೆ ಉಪಹಾರ ಸೇವಿಸಿ ತಮ್ಮ ಕೆಲಸಕ್ಕೆ ತೆರಳಲು ಸಿದ್ಧತೆ ನಡೆಸುತಿದ್ರು, ಇತ್ತ ಓರ್ವ ಕಾರ್ಮಿಕ ಉಪಹಾರ ತಯಾರಿಸುತ್ತಿದ್ದ ಆಗ ಇದ್ದಕಿದ್ದಂತೆ ಸಿಲಿಂಡರ್‌ಗೆ ಬೆಂಕಿ ತಗುಲಿ ಬ್ಲಾಸ್ಟ್ ಆಗಿ ಇಡೀ ಮನೆ ಹೊತ್ತಿ ಉರಿದಿದೆ.
Advertisement
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಈ ಘಟನೆ ನಡೆದಿದೆ. ಜಿಗಣಿ ಪೊಲೀಸ್ ಠಾಣೆ ಹಿಂಬಾಗದಲ್ಲಿರುವ ಮಂಜುನಾಥ್ ರೆಡ್ಡಿ ಮನೆ ಈ ಮನೆಯಲ್ಲಿ ಕಳೆದೆರಡು ವರ್ಷಗಳಿಂದ ಆ ಮನೆಯಲ್ಲಿ ಉತ್ತರ ಭಾರತದ 3 ಮಂದಿ ಬಾಡಿಗೆ ಆಧಾರದಲ್ಲಿ ವಾಸವಿದ್ದರು. ಆದರೆ ನಿನ್ನೆ ಹಬ್ಬ ಅಂತ ಹೇಳಿ ಸಂಬಂಧಿಕರು ಸಹ ಮನೆಗೆ ಬಂದಿದ್ದರು ಇಂದು ಬೆಳಿಗ್ಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಈ ವೇಳೆ ಐದು ಮಂದಿಗೆ ಗಂಭೀರ ಗಾಯವಾಗಿದ್ದು, ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ
Advertisement
Advertisement
ಗಾಯಾಳುಗಳನ್ನು ಜಗದೀಶ್. ಶಾಂತಿಬೈ, ಪ್ರಕಾಶ್, ಕಾಡು, ಜೈಮುಲ್, ಮಂಜು ಹಾಗೂ ವಲ್ಲಿ ಎಂದು ಗುರಿತಿಸಲಾಗಿದೆ. ಇವರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಮುಂಜಾನೆ ಕೆಲಸಕ್ಕೆ ಹೊರಡಲು ಸಿದ್ಧವಾಗುವ ವೇಳೆ ಘಟನೆ ನಡೆದಿದ್ದರಿಂದ ಪ್ರಣಾಪಯಾದಿಂದ ಪಾರಾಗಿದ್ದಾರೆ ಘಟನೆಗೆ ಕಾರಣ ಏನು ಎಂಬುದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಅಗ್ನಿಶಾಮಕದ ಅಧಿಕಾರಿಗಳಿಂದ ತನಿಖೆ ಕೈಗೊಂಡಿದ್ದಾರೆ ಜೊತೆಗೆ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ