ಡಾಲಿ ಪಿಕ್ಚರ್ಸ್ ನಿರ್ಮಾಣದಡಿ ಮೂಡಿ ಬರುತ್ತಿರುವ ‘ವಿದ್ಯಾಪತಿ’ (Vidyapati) ಸಿನಿಮಾಗೀಗ ಬಹುಬೇಡಿಕೆಯ ಖಳನಾಯಕ ಗರುಡ ರಾಮ್ ಎಂಟ್ರಿ ಕೊಟ್ಟಿದ್ದಾರೆ. ಕೆಜಿಎಫ್, ಸಲಾರ್, ಬಘೀರ ಸೇರಿದಂತೆ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಖಡಕ್ ವಿಲನ್ ಗರುಡ ರಾಮ್ (Garuda Ram) ಅವರು ನಾಗಭೂಷಣ್ ಎದುರು ತೊಡೆ ತಟ್ಟಿದ್ದಾರೆ.
Advertisement
ರಾಮಚಂದ್ರ ರಾಜು ಹೆಸರಿಗಿಂತ ಗರುಡ ಎಂದೇ ಖ್ಯಾತಿಗಳಿಸಿರುವ ಅವರು ‘ವಿದ್ಯಾಪತಿ’ ಸಿನಿಮಾದಲ್ಲಿ ಖಳನಾಯಕನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಗರುಡ ರಾಮ್ ಎಂಟ್ರಿಯ ಮೇಕಿಂಗ್ ವಿಡಿಯೋ ಮೂಲಕ ಚಿತ್ರತಂಡ ಅವರನ್ನು ಸ್ವಾಗತಿಸಿದ್ದು, ಸಿಕ್ಸ್ ಪ್ಯಾಕ್‌ನಲ್ಲಿ ರಾಮಚಂದ್ರ ರಾಜು ಕಾಣಿಸಿಕೊಂಡಿದ್ದಾರೆ. ಗರುಡ ರಾಮ್ (Garudaram) ಹಾಗೂ ನಾಗಭೂಷಣ್ ಇವರಿಬ್ಬರ ಜುಗಲ್‌ಬಂಧಿ ಹೇಗಿರಲಿದೆ ಎಂಬ ನಿರೀಕ್ಷೆ ಹುಟ್ಟಿಸಿದೆ. ಇದನ್ನೂ ಓದಿ:ಕೊನೆಗೂ ಭಾವಿ ಪತಿಯನ್ನು ಪರಿಚಯಿಸಿದ ಚೈತ್ರಾ ವಾಸುದೇವನ್
Advertisement
View this post on Instagram
Advertisement
ಇಕ್ಕಟ್ ಕಥೆ ಹೇಳಿದ್ದ ಇಶಾಂ ಮತ್ತು ಹಸೀಂ ಖಾನ್ ‘ವಿದ್ಯಾಪತಿ’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಸಿನಿಮಾವನ್ನು ಇವರೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ. ಆಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಾಗಭೂಷಣ್‌ಗೆ ನಾಯಕಿಯಾಗಿ ಉಪಾಧ್ಯಕ್ಷ ಬ್ಯೂಟಿ ಮಲೈಕಾ ವಸೂಪಾಲ್ ಕಾಣಿಸಿಕೊಳ್ಳಲಿದ್ದಾರೆ. ಕರಾಟೆ ಮಾಸ್ಟರ್ ಅವತಾರದಲ್ಲಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ.
Advertisement
ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ವಿದ್ಯಾಪತಿ ಸಿನಿಮಾಕ್ಕಿದೆ. ‘ಟಗರು ಪಲ್ಯ’ ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ ಮತ್ತೊಮ್ಮೆ ಡಾಲಿ ಜೊತೆ ಕೈ ಜೋಡಿಸಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.