– ಕಾನೂನು ಸುವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ಪ್ರಶ್ನೆ
ಉಡುಪಿ: ಯುವಕನ ಮೇಲೆ ಕಾರು ಹತ್ತಿಸಿದ ಕಿರಾತಕ. ತಲ್ವಾರ್ ತೆಗೆದುಕೊಂಡು ಕಾರಿನ ಮೇಲೆ ಮನಬಂದಂತೆ ದಾಳಿ ಮಾಡಿದ ರೌಡಿ. ಯರ್ರಾಬಿರಿ ರಿವರ್ಸ್, ಕಾರು ನಜ್ಜುಗುಜ್ಜು. ಇದು ಉಡುಪಿಯ ಶಾರದಾ ಮಂಟಪ ಜಂಕ್ಷನ್‍ನಲ್ಲಿ ನಡೆದ ಮಾರಾಮಾರಿಯ ಹೈಲೈಟ್ಸ್.
Advertisement
ಹೌದು. ಉಡುಪಿ (Udupi) ನಗರದ ಶಾರದಾ ಮಂಟಪ ಜಂಕ್ಷನ್ ನಲ್ಲಿ ಯುವಕರ ಗುಂಪಿನ ನಡುವೆ ಗ್ಯಾಂಗ್ ವಾರ್ ನಡೆದಿದೆ. ವ್ಯವಹಾರಕ್ಕೆ ಸಂಬಂಧಿಸಿದ ತಗಾದೆ ಮಾರಾಮಾರಿಯವರೆಗೆ ಬಂದಿದೆ. ರಾಷ್ಟ್ರೀಯ ಹೆದ್ದಾರಿ 169ಎ ಯಲ್ಲಿ ಸಾರ್ವಜನಿಕರು ಓಡಾಟ ಮಾಡುತ್ತಿದ್ದ ಸಂದರ್ಭದಲ್ಲೇ ತಲ್ವಾರ್ ತೆಗೆದು ಹೊಡೆದಾಟ ಮಾಡಲು ಯುವಕರು ಯತ್ನಿಸಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ವ್ಯಕ್ತಿಯೊಬ್ಬ ಘಟನೆಯ ಸಂಪೂರ್ಣ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Advertisement
ಕಾಪು ತಾಲೂಕು ಮೂಲದ ಗರುಡ ಗ್ಯಾಂಗ್‍ನ (Garuda Gang) ಯುವಕರು ಕಾರು ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಡಿದ್ದಾರೆ. ಕಾರನ್ನು ಕಾನೂನು ಬಾಹಿರ ಕೃತ್ಯಕ್ಕೆ ಬಳಸಿದ್ದರು ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಶುರುವಾದ ತಗಾದೆ ವಿಕೋಪಕ್ಕೆ ಹೋಗಿದೆ. ಘಟನೆ ನಡೆದ ಸಂದರ್ಭ ಸುತ್ತಮುತ್ತಲ ಕಟ್ಟಡಗಳಲ್ಲಿದ್ದ ಸಿಸಿ ಟಿವಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪ್ರಬುದ್ಧಾ ಹತ್ಯೆಯನ್ನು ಆತ್ಮಹತ್ಯೆ ಅಂತಾ ಬಿಂಬಿಸಲು ಪ್ಲಾನ್- ಕುತ್ತಿಗೆ, ಕೈಯಲ್ಲಿದ್ದ ಕಲೆಗಳನ್ನೇ ಬಂಡವಾಳ ಮಾಡಿಕೊಂಡಿದ್ದ ಅಪ್ರಾಪ್ತ
Advertisement
Advertisement
ಈ ಸಂಬಂಧ ಎಸ್.ಪಿ ಡಾ. ಅರುಣ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸಾರ್ವಜನಿಕ ಸ್ಥಳದಲ್ಲಿದ್ದ ದನಗಳ್ಳತನ, ಕಳ್ಳತನ, ರಾಬರಿ, ವಸೂಲಿ, ಹೊಡೆದಾಟ, ಅಮಲು ಪದಾರ್ಥ ಸಾಗಣೆ ಹೀಗೆ ಹಲವಾರು ಕಾನೂನುಬಾಹಿರ ಕೃತ್ಯಗಳಿಗೆ ಗರುಡ ಗ್ಯಾಂಗ್ ಕುಖ್ಯಾತಿ ಪಡೆದಿದೆ. ಈಗಾಗಲೇ ವಿವಿಧ ಪ್ರಾಣಿಗಳಲ್ಲಿ ಪ್ರಕರಣಗಳು ದಾಖಲಾಗಿದೆ. ಈ ಘಟನೆಯಲ್ಲಿ ಕಾಪು ಮೂಲದ ಆಶಿಕ್ ಮತ್ತು ಗುಜ್ಜರಬೆಟ್ಟು ಮೂಲದ ರಾಕೀಬ್ ಹಾಗೂ ಇನ್ನೋರ್ವನ ಬಂಧನವಾಗಿದೆ. ಏಳಕ್ಕೂ ಹೆಚ್ಚು ಜನರಿಗಾಗಿ ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ. ಘಟನೆಯ ಪ್ರಮುಖ ಆರೋಪಿ ಸಹಿತ ಎಲ್ಲರನ್ನು ಬಂಧಿಸುವುದಾಗಿ ಹೇಳಿದ್ದಾರೆ.
ಎರಡು ಕಾರು, ಬೈಕ್, ತಲವಾರು ಮತ್ತು ಡ್ರ್ಯಾಗರ್ ವಶಕ್ಕೆ ಪಡೆಯಲಾಗಿದೆ. ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಮಾಡುವ ವ್ಯವಹಾರ ಏನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಕಾನೂನು ಸವ್ಯವಸ್ಥೆಯನ್ನ ಪೊಲೀಸರು ಕಟ್ಟುನಿಟ್ಟು ಮಾಡಬೇಕು ಸಾರ್ವಜನಿಕರ ನಿಶ್ಚಿತತೆಯಿಂದ ವಾತಾವರಣ ಸೃಷ್ಟಿ ಮಾಡಬೇಕು ಎಂಬುದಾಗಿ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.