ಗಾರ್ಲಿಕ್ ಬ್ರೆಡ್ ಮನೆಯಲ್ಲೇ ಟ್ರೈ ಮಾಡಿ

Public TV
1 Min Read
Garlic Bread

ದೊಡ್ಡ ದೊಡ್ಡ ಮಾಲ್‌ಗಳಲ್ಲಿ, ಹೋಟೆಲ್‌ಗಳಲ್ಲಿ ಅಥವಾ ಡೋಮಿನೋಸ್‌ನ ಆಹಾರದ ಮೆನುವಿನಲ್ಲಿ ಗಾರ್ಲಿಕ್ ಬ್ರೆಡ್ ಇದ್ದೇ ಇರುತ್ತದೆ. ಅನೇಕರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲೂ ಮಕ್ಕಳಿಗೆ ಈ ರೀತಿಯಾದ ತಿಂಡಿ ಬಹುಬೇಗ ಸೇರುತ್ತದೆ. ಹೊರಗಡೆ ಅಂಗಡಿಗಳಲ್ಲಿ ಇವೆಲ್ಲಾ ಸ್ವಲ್ಪ ದುಬಾರಿಯಾಗಿದೆ. ಆದ್ದರಿಂದ ಇವತ್ತಿನ ನಮ್ಮ ರೆಸಿಪಿಯಲ್ಲಿ ಮನೆಯಲ್ಲೇ ಸುಲಭವಾಗಿ ಗಾರ್ಲಿಕ್ ಬ್ರೆಡ್ ಯಾವ ರೀತಿ ಮಾಡಬಹುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಕ್ವಿಕ್ ಆಗಿ ಮಾಡಿ ಆನಿಯನ್ ಪಿಕ್ಕಲ್

Garlic Bread 2

ಬೇಕಾಗುವ ಸಾಮಗ್ರಿಗಳು:
ಬೆಣ್ಣೆ- 50 ಗ್ರಾಂ
ತುರಿದ ಬೆಳ್ಳುಳ್ಳಿ – 2 ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಚಮಚ
ಓರೆಗಾನೋ – 1 ಚಮಚ
ಚಿಲ್ಲಿ ಫ್ಲೇಕ್ಸ್ – 1 ಚಮಚ
ಪೆಪ್ಪರ್ ಪೌಡರ್ – ಕಾಲು ಚಮಚ
ಉಪ್ಪು – ಅರ್ಧ ಚಮಚ
ಬ್ರೆಡ್ – ಅಗತ್ಯಕ್ಕೆ ತಕ್ಕಷ್ಟು
Garlic Bread 1

ಮಾಡುವ ವಿಧಾನ:
* ಮೊದಲಿಗೆ ಒಂದು ಬೌಲ್‌ನಲ್ಲಿ ಬೆಣ್ಣೆ ಹಾಕಿಕೊಂಡು ಅದಕ್ಕೆ ತುರಿದ ಬೆಳ್ಳುಳ್ಳಿ ಹಾಕಿಕೊಳ್ಳಿ. ಬಳಿಕ ಅದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಓರೆಗಾನೋ, ಚಿಲ್ಲಿ ಫ್ಲೇಕ್ಸ್, ಪೆಪ್ಪರ್ ಪೌಡರ್, ಉಪ್ಪನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಈಗ ಒಂದು ಬ್ರೆಡ್ ತೆಗೆದುಕೊಂಡು ಅದಕ್ಕೆ ಮಿಶ್ರಣವನ್ನು ಹಚ್ಚಿಕೊಳ್ಳಿ. ಬಳಿಕ ಅದನ್ನು ಎರಡು ತುಂಡು ಮಾಡಿಕೊಳ್ಳಿ.
* ನಂತರ ಒಂದು ಪ್ಯಾನ್ ಮೇಲೆ ಬ್ರೆಡ್ ಇಟ್ಟುಕೊಂಡು ಮೀಡಿಯಮ್ ಫ್ಲೇಮ್‌ನಲ್ಲಿ ರೋಸ್ಟ್ ಮಾಡಿಕೊಳ್ಳಿ. ಬ್ರೆಡ್ ಗೋಲ್ಡನ್ ಕಲರ್ ಬರುವವರೆಗೆ ಫ್ರೈ ಮಾಡಿಕೊಳ್ಳಿ. ಎರಡೂ ಬದಿ ಫ್ರೈ ಆದಮೇಲೆ ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿಕೊಂಡು ಬಿಸಿಬಿಸಿಯಾಗಿ ತಿನ್ನಲು ಕೊಡಿ. ಇದನ್ನೂ ಓದಿ: ಟೇಸ್ಟಿ ವೆಜ್‌ಟೇಬಲ್ ಗಂಜಿ ಸವಿದು ದಿನ ಪ್ರಾರಂಭಿಸಿ

Web Stories

Share This Article