ಲಕ್ನೋ: ಬೀದಿನಾಯಿಗಳು ಹಸಿವಿನಿಂದ ಬೊಗಳುತ್ತಿರುವುದನ್ನು ಕಂಡ ಪ್ಲಂಬರ್, ಅವುಗಳಿಗೆ ಆಹಾರ ನೀಡಲು ಹೋದಾಗ ತೋಟಗಾರನೊಬ್ಬ ವಿರೋಧ ವ್ಯಕ್ತಪಡಿಸಿ ಕತ್ತರಿಯಿಂದ ಇರಿದು ಕೊಂದಿರುವ ಘಟನೆ ನಡೆದಿದೆ.
ಮುಸ್ತಾಕಿಮ್ (27) ಮೃತನಾಗಿದ್ದಾನೆ. ಈತ ಬಿಹಾರದ ಮೂಲದವನಾಗಿದ್ದಾನೆ. ಚತರ್‍ಪಾಲ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಈತ ವಿಕ್ಟೋರಿಯಾ ಪಾರ್ಕ್‍ನಲ್ಲಿ ತೋಟಗಾರನಾಗಿದ್ದ. ಬೀದಿ ನಾಯಿಗೆ ಆಹಾರ ನೀಡುತ್ತಿದ್ದಾನೆ ಎಂದು ಪ್ಲಂಬರ್ ಮುಸ್ತಾಕಿಮ್‍ಗೆ ಚಾಕುವಿನಿಂದ ಇರಿದಿದ್ದಾನೆ.
Advertisement
ಪ್ಲಂಬರ್ ಮುಸ್ತಾಕಿಮ್ ಗಾಜಿಯಾಬಾದ್‍ನ ಇಂದಿರಾಪುರಂನಲ್ಲಿರುವ ಬೀದಿ ನಾಯಿಗೆ ಆಹಾರ ನೀಡಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ತೋಟದ ಮಾಲೀಕ ಅವುಗಳಿಗೆ ಆಹಾರ ನೀಡಬೇಡಿ ಎಂದು ಖ್ಯಾತೆ ತೆಗೆದಿದ್ದಾನೆ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪಗೊಂಡ ತೋಟಗಾರ ಗಾರ್ಡನ್ ಕತ್ತರಿಸುವ ಕತ್ತರಿಯಿಂದ ಪ್ಲಂಬರ್ ಎದೆಗೆ ಇರಿದು ಕೊಂದಿದ್ದಾನೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್ ಬಳಿಕ ಪಾಕ್ ಪ್ರಧಾನಿ ಆಗ್ತಾರಾ ಶೆಹಬಾಜ್ ಷರೀಫ್?
Advertisement
Advertisement
ಗಾಯಗೊಂಡಿದ್ದ ಮುಸ್ತಾಕಿಮ್‍ನನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮುಸ್ತಾಕಿಮ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ಚತರ್‍ಪಾಲ್‍ನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.