ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಲ್ಲೆಂದರಲ್ಲಿ ಕಸ ಹಾಕುವುದನ್ನ ತಡೆಯಲು ಮುಂದಾಗಿರುವ ಪಾಲಿಕೆ ಭಾರೀ ಪ್ರಮಾಣದ ವಸೂಲಿಗೆ ಮುಂದಾಗಿದೆ.
ಬೆಂಗಳೂರಿನಲ್ಲಿ 22 ದಿನಗಳಲ್ಲಿ ಮಾರ್ಷಲ್‍ಗಳು 13 ಲಕ್ಷ ರೂಪಾಯಿ ಸಂಗ್ರಹ ಮಾಡಿದ್ದಾರೆ. 2019 ಸೆಪ್ಟೆಂಬರ್ ನಿಂದ ಮಾರ್ಷಲ್‍ಗಳು 198 ವಾರ್ಡ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ 50.90 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದ್ದಾರೆ. 2020 ಜನವರಿ 1 ರಿಂದ ಜನವರಿ 22ರವರೆಗೆ ಒಟ್ಟು 1,278 ಪ್ರಕರಣಗಳಿಂದ 13.01 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದ್ದಾರೆ.
Advertisement
Advertisement
2019ರ ಸೆಪ್ಟೆಂಬರ್ ನಿಂದ ಇವರೆಗೆ ಪಾಲಿಕೆ ದಂಡದ ರೂಪದಲ್ಲಿ 63.91 ಲಕ್ಷ ರೂಪಾಯಿ ಆದಾಯ ಬಂದಿದೆ. ರಸ್ತೆಗಳಲ್ಲಿ ಕಸ ಎಸೆಯುವವರ ಬಗ್ಗೆ ಪಾಲಿಕೆಯ ಮಾರ್ಷಲ್‍ಗಳು ಪ್ರತಿನಿತ್ಯ ನಿಗಾ ವಹಿಸುತ್ತಿದ್ದಾರೆ. ಪಾಲಿಕೆ ಉದ್ಯಮ ಮಳಿಗೆಯಲ್ಲಿ ಪ್ಲಾಸ್ಟಿಕ್ ಬಳಕೆ, ಹೋಟೆಲ್-ರೆಸ್ಟೋರೆಂಟ್‍ಗಳಲ್ಲಿ ಅನಧಿಕೃತ ಮಧ್ಯಪಾನಕ್ಕೆ ಅವಕಾಶ ಮಾಡಿಕೊಡುವ ಹಾಗೂ ಕಸ ವಿಂಗಡನೆ ಮಾಡದ ಉದ್ಯಮ ಮತ್ತು ಸಂಸ್ಥೆಗಳ ಮೇಲೆ ದಂಡ ವಿಧಿಸಲಾಗಿತ್ತು.
Advertisement
ಇತ್ತೀಚೆಗೆ ಮನೆಗಳಿಂದ ಕಸ ಸಂಗ್ರಹಣೆ ಮಾಡುವ ವಾಹನಗಳು, ವಿಂಗಡಿಸದ ಕಸವಿದ್ದರೆ ಕಸ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಬ್ಲ್ಯಾಕ್ ಸ್ಪಾಟ್‍ಗಳು ನಿರ್ಮಾಣವಾಗುತ್ತಿದ್ದವು. ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ನಗರದಲ್ಲಿ ಕಸ ಹಾಕುವ ಬ್ಲ್ಯಾಕ್ ಸ್ಪಾಟ್‍ಗಳನ್ನ ನಿರ್ಮೂಲನೆ ಮಾಡಲು ದಂಡ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.