ಮೈಸೂರು: ಸೋಮವಾರ ನಗರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದರಿಂದ ಮಹಾರಾಜ ಕಾಲೇಜು ಮೈದಾನದ ಮೋದಿಮಯವಾಗಿತ್ತು. ಆದ್ರೆ ಇಂದು ಅದೇ ಮೈದಾನವೆಲ್ಲ ಕಸಮಯವಾಗಿದೆ.
ಮಹರಾಜ ಕಾಲೇಜು ಮೈದಾನದ ತುಂಬೆಲ್ಲಾ ರಾಶಿ ರಾಶಿ ನೀರಿನ ಪ್ಯಾಕೇಟ್ ಗಳು ಎಲ್ಲೆಂದರಲ್ಲಿ ಬಿದ್ದಿವೆ. ಕಾರ್ಯಕ್ರಮದ ಆಯೋಜಕರು ಅಗತ್ಯಕ್ಕಿಂತ ಹೆಚ್ಚಿನ ನೀರಿನ ಪ್ಯಾಕೇಟ್ ತರಿಸಿದ್ದರಿಂದ ಮೈದಾನದ ತುಂಬೆಲ್ಲಾ ಬಿದ್ದಿವೆ. ವ್ಯರ್ಥವಾಗಿ ಬಿದ್ದಿರುವ ಪ್ಯಾಕೇಟ್ ಗಳನ್ನು ವಿದ್ಯಾರ್ಥಿಗಳು ಶೇಖರಣೆ ಮಾಡಿ ಮೈದಾನ ಸ್ವಚ್ಛಗೊಳಿಸುತ್ತಿದ್ದಾರೆ. ಇದನ್ನೂ ಓದಿ: ಅರಮನೆ ಮೈದಾನದಲ್ಲಿ ಕಸದ ರಾಶಿ- ಇದೇನಾ ಮೋದಿ ಕನಸಿನ ಸ್ವಚ್ಛ ಭಾರತ?
Advertisement
ಫೆಬ್ರವರಿ 04ರಂದು ಬೆಂಗಳೂರಿಗೆ ಪ್ರಧಾನಿಗಳು ಆಗಮಿಸಿದ್ದ ವೇಳೆಯೂ ಕಾರ್ಯಕ್ರಮದ ಬಳಿಕ ಅರಮನೆ ಮೈದಾನವೆಲ್ಲಾ ಕಸದಿಂದ ತುಂಬಿತ್ತು. ಈಗ ಮೈಸೂರಿನಲ್ಲಿ ಇದೇ ಕೆಲಸ ಪುನಾರವರ್ತಿತವಾಗಿದೆ. ಸಮಾವೇಶದ ಬಳಿಕ ಬಿಜೆಪಿ ಮುಖಂಡರು ಮೈದಾನದತ್ತ ತಿರುಗಿಯೂ ನೋಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮೋದಿ ಅವರ ಕನಸಿನ ಸ್ವಚ್ಛ ಭಾರತಕ್ಕೆ ರಾಜ್ಯ ಬಿಜೆಪಿ ನಾಯಕರು ಮರೆತು ಬಿಟ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದನ್ನೂ ಓದಿ: ಬಿಜೆಪಿ ಮಂತ್ರಿಯಿಂದಲೇ ರಸ್ತೆ ಬದಿ ಮೂತ್ರ ವಿಸರ್ಜನೆ – ಫೋಟೋ ವೈರಲ್
Advertisement
ಇದನ್ನೂ ಓದಿ: ಸ್ವಚ್ಛ ಭಾರತಕ್ಕೆ ಅವಮಾನ: ಸಾರ್ವಜನಿಕ ಸ್ಥಳದಲ್ಲಿ ಕೇಂದ್ರ ಕೃಷಿ ಸಚಿವರ ಸೂಸು