– ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್‍ನಲ್ಲಿ ಬಯಲಾಯ್ತು ಅಸಲಿಯತ್ತು
ಬೆಂಗಳೂರು: ಸಿಲಿಕಾನ್ ಸಿಟಿ ಕಸದ ನಗರಿ ಅಂತ ಈಗಾಗಲೇ ಜಗಜ್ಜಾಹೀರಾಗಿದೆ. ಬಿಬಿಸಿಯೇ ಬೆಂಗಳೂರು ನಗರವನ್ನು ಕೊಳಕು ನಗರ ಅಂತಲೂ ಘೋಷಿಸಿ ಬಿಟ್ಟಿದೆ. ಈ ಹಣೆಪಟ್ಟಿಯಿಂದ ಹೊರ ಬರೋದಕ್ಕೆ ಜಾಹೀರಾತಿಗಾಗಿ ಬಿಬಿಎಂಪಿ ಕೋಟಿಗಟ್ಟಲೇ ಹಣ ಕೂಡ ಖರ್ಚು ಮಾಡುತ್ತಿದೆ. ಹಸಿ ಕಸ, ಒಣ ಕಸ ಅಂತ ವಿಂಗಡಣೆ ಮಾಡದಿದ್ರೆ, ನಿಮ್ಮ ಮನೆ ಕಸ ಸ್ವೀಕರಿಸಲ್ಲ ಅಂತ ಬಿಬಿಎಂಪಿ ಫರ್ಮಾನು ಕೂಡ ಹೊರಡಿಸಿದೆ. ಬೆಳಗ್ಗೆ ಹೊತ್ತು ಮನೆ ಮುಂದೆ ಬರೋ ಪೌರ ಕಾರ್ಮಿಕರು ಕಸ ವಿಂಗಡಣೆ ಮಾಡದಿದ್ದರೆ ನಾವು ಸ್ವೀಕರಿಸಲ್ಲ ಅಂತ ಬಿಸಾಡಿ ಹೊರಡುತ್ತಾರೆ. ಆದ್ರೆ, ಇದೀಗ ಈ ರೂಲ್ಸ್ ಗಳನ್ನ ಜನಪ್ರತಿನಿಧಿಗಳು ಫಾಲೋ ಮಾಡುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ.
ಜನಪ್ರತಿನಿಧಿಗಳ ಮನೆಗಳಲ್ಲಿ ಕಸ ವಿಲೇವಾರಿ ಆಗುತ್ತಿದ್ಯಾ? ಅಥವಾ ಇಲ್ವಾ….? ಅಂತ ಪಬ್ಲಿಕ್ ಟಿವಿ ಬೆಳಗ್ಗೆ ಪರೀಕ್ಷೆ ನಡೆಸಲು ಹೊರಟಿತ್ತು. ರಾಜ್ಯದ ಅಧಿಪತಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಪ್ರಮುಖರ ಮನೆ ಬಳಿ ಸ್ಟಿಂಗ್ ಆಪರೇಷನ್ ಕೂಡ ನಡೆಸಿತ್ತು. ಈ ವೇಳೆ ಅಲ್ಲಿ ಕಂಡು ಬಂದ ದೃಶ್ಯ ನಿಜಕ್ಕೂ ಮುಜುಗರ ತರಿಸುವಂತಿತ್ತು.
Advertisement
Advertisement
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಜೆ.ಪಿ. ನಗರ ನಿವಾಸದ ಬಳಿಗೆ ಬೆಳಗ್ಗೆ 6 ಗಂಟೆ ಸುಮಾರಿಗೆ ತೆರಳಿದಾಗ ಅಲ್ಲಿಯ ದೃಶ್ಯ ಕಂಡು ನಿಜಕ್ಕೂ ಆಘಾತವುಂಟಾಗಿದೆ. ಯಾಕಂದ್ರೆ, ನಾಡಿನ ಅಧಿಪತಿ ನಿವಾಸದಲ್ಲೇ ಕಸ ವಿಲೇವಾರಿ ಆಗುತ್ತಿಲ್ಲ.
ಪಬ್ಲಿಕ್ ಪ್ರತಿನಿಧಿ – ನೀವೇ ಮಾಡಿಕೊಳ್ಳಬೇಕಾ?
ಪೌರ ಕಾರ್ಮಿಕ – ಹು…..
ಪ್ರತಿನಿಧಿ – ಅವರು ಮಾಡಿಕೊಡಲ್ವಾ…?
ಪೌರ ಕಾರ್ಮಿಕ – ಇಲ್ಲ. ಅವರ್ಯಾಕೆ ಮಾಡಿಕೊಡಬೇಕು?
ಪ್ರತಿನಿಧಿ – ಹಸಿ, ಒಣ ಕಸ ಬೇರೆ ಮಾಡಿಕೊಡಬೇಕು ಅಲ್ವಾ…?
ಪೌರ ಕಾರ್ಮಿಕ – ನಮ್ ಕೆಲಸ ಅದು ಮಾಡ್ತೀವಿ.
Advertisement
ಮುಖ್ಯಮಂತ್ರಿಗಳ ಮನೆಯಲ್ಲಿ ಕಸ ವಿಲೇವಾರಿ ಆಗುತ್ತಿಲ್ಲ. ಬೆಂಗಳೂರು ಉಸ್ತುವಾರಿ ಸಚಿವರು ಅಂತ ಅನಿಸಿಕೊಂಡ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಮನೆಯಲ್ಲಿ ಏನಾದರೂ ಕಸ ವಿಲೇವಾರಿ ಆಗುತ್ತಿದ್ಯಾ…? ಅಂತ ನೋಡಲು ಹೊರಟ್ರೆ ಅಲ್ಲೂ ಕಸ ವಿಲೇವಾರಿ ಆಗುತ್ತಿರಲಿಲ್ಲ.
Advertisement
ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ನಗರಾಭಿವೃದ್ಧಿ ಸಚಿವರಾದ ಬೆರಳೆಣಿಕೆಯ ದಿನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಸಿ ಕಸ ಬೇರ್ಪಡಿಸಿ ಎಂದು ಸಂದೇಶ ನೀಡಿದ್ರು. ಆದ್ರೆ ಅವರು ವಾಸವಿರೋ ಸದಾಶಿವನಗರ ಮನೆಯಲ್ಲೇ ಕಸ ವಿಂಗಡನೆಯೇ ಆಗುತ್ತಿಲ್ಲ. ಕಡೆ ಪಕ್ಷ ಕಸವನ್ನ ತಂದು ಪೌರಕಾರ್ಮಿಕರ ಕೈಗೂ ಕೊಡಲ್ಲ. ಬದಲಾಗಿ ಅವರ ಮನೆ ಡೆಸ್ಟ್ ಬಿನ್ ತಂದು ಕಸ ಸುರಿದುಕೊಂಡು ಹೋಗ್ತಾರೆ.
ಪ್ರತಿನಿಧಿ – ಎಲ್ಲ ರಾಜಕಾರಣಿಗಳು ಇರೋದು ಇಲ್ಲೇ ತಾನೇ?
ಪೌರಕಾರ್ಮಿಕ – ಹೌದು.
ಪ್ರತಿನಿಧಿ – ಕಸ ಬೇರ್ಪಡಿಸಿ ಕೊಡ್ತಾರಾ…?
ಪೌರಕಾರ್ಮಿಕ – ಇಲ್ಲ
ಪ್ರತಿನಿಧಿ – ಯಾಕೆ ಅಂತ ಕೇಳೋದು…?
ಪೌರಕಾರ್ಮಿಕ – ನಿಮ್ ಕೆಲಸನೇ ಅದು. ಮಾಡಿದರೆ ಮಾಡಿ ಇಲ್ಲ ಬಿಡಿ ಅಂತಾರೆ. ನಮ್ ಕಷ್ಟ ಕೇಳೋರು ಯಾರು?
ಪ್ರತಿನಿಧಿ – ಡಿಸಿಎಂ ಮನೆಯಲ್ಲಿ ಕಸ ಬೇರ್ಪಡಿಸ್ತಾರಾ?
ಪೌರಕಾರ್ಮಿಕ – ಅವರೂ ಅಷ್ಟೇ.. ಕಸ ವಿಂಗಡಿಸಿಲ್ಲ
ಸಿಎಂ, ಡಿಸಿಎಂ ಆಯ್ತು. ಬಳಿಕ ಮಾಜಿ ಪ್ರಧಾನಿ ದೇವೇಗೌಡರ ಮನೆಯಲ್ಲಿ ಏನಾಗ್ತಿದೆ ಅಂತ ಪದ್ಮನಾಭನಗರ ಕಡೆ ಹೊರಟ್ರೆ ಅಲ್ಲೂ ಕಂಡುಬಂದಿದ್ದು ಮಾಮೂಲಿ ಚಿತ್ರಣವೇ.
ಪ್ರತಿನಿಧಿ – ದೇವೇಗೌಡರ ಕಸ ವಿಂಗಡಿಸಿ ಕೊಡ್ತಾರಾ ?
ಪೌರಕಾರ್ಮಿಕ – ಯಾರ್ ಮನೆಯವ್ರು…?
ಪ್ರತಿನಿಧಿ – ಗೌಡರ ಮನೆಯವ್ರು…?
ಪೌರಕಾರ್ಮಿಕ – ಇಲ್ಲ. ಒಬ್ರು ಮಾಡ್ತಾರೆ. ಇನ್ನೊಬ್ಬರು ಮಾಡಲ್ಲ.
ಗೌಡರ ನಿವಾಸದಲ್ಲೂ ಕಸ ವಿಲೇವಾರಿ ಆಗುತ್ತಿಲ್ಲ. ಬಳಿಕ ಅಲ್ಲಿಂದ ನೇರವಾಗಿ ಜಯಮಾಲಾ ಮನೆ ನೋಡಿ ಬಿಡೋಣ ಅಂತ ಡಾಲರ್ಸ್ ಕಾಲೋನಿಯತ್ತ ಹೊರಟ್ವಿ. ಸಚಿವೆ ಆಗಿರುವುದಕ್ಕಿಂತ ಗೃಹಿಣಿ ಆಗಿರೋದ್ರಿಂದ ನಮ್ಮ ನಿರೀಕ್ಷೆಗಳೂ ಹೆಚ್ಚಿದ್ವು. ಆದ್ರೆ ಆಗಿದ್ದೇ ಬೇರೆ. ಏನಂದ್ರೆ ಸಚಿವೆಯ ಮನೆಯಲ್ಲೂ ಕಸ ವಿಂಗಡಣೆಯೇ ಇಲ್ಲ.
ಪ್ರತಿನಿಧಿ – ಮಿನಿಸ್ಟರ್ ಮನೆಯಲ್ಲಿ ಕಸ ವಿಂಗಡಿಸಲ್ವಂತೆ ?
ಪೌರಕಾರ್ಮಿಕ – ಹೌದು. ಇಲ್ಲಿ ಒಬ್ಬರ ಮನೆ ಇದೆ .. ಜಯಮಾಲಾ ಮನೆ, ವಿಂಗಡಿಸ್ತಾರೆ.. ಆದ್ರೆ ಮಿಕ್ಸ್ ಮಾಡಿ ಹಾಕುತ್ತಾರೆ. ನಾವೇ ಕ್ಲೀನ್ ಮಾಡಬೇಕು.
ಪ್ರತಿನಿಧಿ – ಹು..
ಪೌರಕಾರ್ಮಿಕ – ಮೇಡಂ ನೋಡಿದ್ರೆ ಬೈಯ್ತಾರೆ.. ಆದ್ರೆ ಇದೆಲ್ಲಾ ಕೆಲಸಗಾರರ ಅವಾಂತರ
ಪೌರಕಾರ್ಮಿಕ- ಯಾಕೆ ಕಸ ಸಪರೇಟ್ ಮಾಡಿ ಕೊಡ್ತಾ ಇಲ್ಲ
ಮಂತ್ರಿ ಮನೆ ಕೆಲಸದಾಕೆ – ಗೊತ್ತಿಲ್ಲ ನನಗೆ.
ಪ್ರತಿನಿಧಿ – ಯಾಕೆ ಮಾಡ್ತಾ ಇಲ್ಲ?
ಮಂತ್ರಿ ಮನೆ ಕೆಲಸದಾಕೆ – ನನಗೆ ಗೊತ್ತಿಲ್ಲ, ಕಸ ಗುಡಿಸೋರು ಬೇರೆ? ಕ್ಲೀನ್ ಮಾಡೋರು ಬೇರೆ .. ಇನ್ನೊಬ್ರು ಕೇಳಿ ಗೊತ್ತಿಲ್ಲ..
ಪೌರಕಾರ್ಮಿಕ – ಅವತ್ತೇ ಹಿಗ್ ಮಾಡ್ ಬಾರದು ಅಂತ ಹೇಳಿಲ್ವಾ…?
ಪೌರಕಾರ್ಮಿಕ – ಬಕೆಟ್ ನಲ್ಲಿ ಪ್ಲಾಸ್ಟಿಕ್ , ಬಾಟೆಲ್ ಎಲ್ಲ ಸರ್ಪೆಟ್ ಮಾಡಿ, ಇಲ್ಲವಾದ್ರೆ ಮೇಡಂಗೆ ಹೇಳ್ತಿವಿ.. ಎಲ್ಲರೂ ಕಂಪ್ಲೇಂಟ್ ಮಾಡ್ತಾರೆ
ಮಂತ್ರಿ ಮನೆ ಕೆಲಸದಾಕೆ – ಆಯ್ತು ಇನ್ಮುಂದೆ ಮಾಡ್ತಿನಿ
ಆಡಳಿತ ಮೈತ್ರಿ ಪಕ್ಷದ ನಾಯಕರನ್ನ ಕಥೆ ಈ ರೀತಿಯಾಗಿತ್ತು. ಈಗ ಇದೆಲ್ಲ ಸರಿನಾ ಅಂತ ಕೇಳಬೇಕಾದ ವಿರೋಧ ಪಕ್ಷದ ನಾಯಕರ ಮನೆ ಬಳೀ ಹೋದ್ರೆ ಅವರದ್ದು ಇದೇ ಕಥೆ. ಡಾಲರ್ಸ್ ಕಾಲೋನಿಯಲ್ಲಿರೊ ಬಿ.ಎಸ್ ಯಡಿಯೂರಪ್ಪ ನಿವಾಸದಲ್ಲೂ ಕಸ ವಿಂಗಡನೆ ಮಾಡಲ್ಲ.
ಪೌರಕಾರ್ಮಿಕ – ಎರಡು ಮನೆ ಕ್ಲಿನ್ ಮಾಡಿ ಕೊಡ್ತಾರೆ.. ಉಳಿದ ಇಬ್ರು ಹಾಗೇ ಕೊಡ್ತಾರೆ
ಪ್ರತಿನಿಧಿ – ಯಡಿಯೂರಪ್ಪ ಪಿಎ ಗಾದ್ರೂ ಹೇಳಬೇಕಿತ್ತು.
ಪೌರಕಾರ್ಮಿಕ – ಅವರೆಲ್ಲ ನಮ್ ಹತ್ರ ಎಲ್ಲಿ ಮಾತಾಡ್ತಾರೆ. ಬರ್ತಾರೆ. ಹೋಗ್ತಾರೆ.
ಪ್ರತಿನಿಧಿ – ಯಾರಿಗಾದ್ರೂ ಹೇಳಿದ್ರಾ?
ಪೌರಕಾರ್ಮಿಕ – ಯಾರಿಗೂ ಹೇಳಿಲ್ಲ.. ನಾವೇ ಮಾಡಿ ಕೊಳ್ತಿವಿ
ಒಟ್ಟಿನಲ್ಲಿ ಬಾಯಿಯಲ್ಲಿ ಹೇಳೋದು ಸುಲಭ. ಮಾಡೊದು ಕಷ್ಟ. ಶ್ರೀಸಾಮಾನ್ಯರು ಕಸ ವಿಂಗಡಣೆ ಮಾಡದಿದ್ದರೆ ದಂಡ ವಿಧಿಸೋ ಬಿಬಿಎಂಪಿ ಅಧಿಕಾರಿಗಳು, ಜನಪ್ರತಿನಿಧಿಗಳ ಬಗ್ಗೆ ಕೇಳಿದ್ರೆ, ಕೊಡೋ ಉತ್ತರನೇ ಬೇರೆಯದ್ದಾಗಿರುತ್ತದೆ.
https://www.youtube.com/watch?v=bJyc-Nl-fEI
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv