ಬೆಂಗಳೂರು: ನಗರದ ನಾಲ್ಕು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಇಂದೋರ್ ಮಾದರಿಯ ಕಸ ನಿರ್ವಹಣೆಯನ್ನು ಜಾರಿಗೆ ತರಲಾಗಿದೆ.
ರಾತ್ರಿ ವೇಳೆಯಲ್ಲಿ ವಾಣಿಜ್ಯ ಕಟ್ಟಡಗಳಿಂದ ಕಸ ಸಂಗ್ರಹ ಮಾಡುವುದರಿಂದ ಬ್ಲಾಕ್ ಸ್ಪಾಟ್‍ಗಳು ಕಡಿಮೆ ಸೃಷ್ಟಿಯಾಗಲಿವೆ. ಅಲ್ಲದೆ ಇದೇ ರೀತಿಯಲ್ಲಿ ಪ್ರತಿ ಮನೆ ಬಾಗಿಲಿನಿಂದ ರಾತ್ರಿ ಹೊತ್ತು ಹಾಗೂ ಅಗತ್ಯ ಬಿದ್ದೆಡೆ ಮೂರೂ ಪಾಳಿಯಲ್ಲಿ ಕಸ ಸಂಗ್ರಹಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.
Advertisement
ಈ ಬಗ್ಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ನೂರು ದಿನದಲ್ಲಿ ಪ್ರಾಯೋಗಿಕ ಯೋಜನೆಯ ಸಂಕ್ಷಿಪ್ತ ಚಿತ್ರಣ ಸಿಗಲಿದೆ. ಬ್ಲಾಕ್ ಸ್ಪಾಟ್‍ಗಳು ಯಾಕೆ ಸೃಷ್ಟಿಯಾಗುತ್ತಿದೆ ಎಂದು ಕಾರಣ ಹುಡುಕಲಾಗುತ್ತಿದೆ. ಮುಂದೆ ಬರುವ ದಿನಗಳಲ್ಲಿ ಅಧ್ಯಯನ ಮಾಡಿ, ಈ ಯೋಜನೆಯ ಲೋಪದೋಷ ಸರಿಪಡಿಸಿ ಎಲ್ಲಾ ವಾರ್ಡ್‌ಗಳಲ್ಲೂ ಯೋಜನೆ ಜಾರಿಗೆ ತರಲಾಗುವುದು ಎಂದರು.
Advertisement
ಅಲ್ಲದೆ ಕೆಲವೊಂದು ಕಡೆ ಡೇ ಶಿಫ್ಟ್, ನೈಟ್ ಶಿಫ್ಟ್, ಮಧ್ಯಾಹ್ನದ ಶಿಫ್ಟ್ ನಲ್ಲಿ ಕಸ ತೆಗೆದು, ಜನರಿಗೆ ಕಸ ಹೊರಗೆ ಎಸೆಯದಂತೆ ಮಾಡಬೇಕು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿ ಬರುವವರಿಗೆ ಬೆಳಗ್ಗೆ ಬೇಗ ಕಸ ಕೊಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಯಾವ ಯಾವ ಪ್ರದೇಶದಲ್ಲಿ ಕಸ ಹೇಗೆ ಸಂಗ್ರಹಿಸಬೇಕು ಎಂಬುದು ಗೊತ್ತಾಗಲಿದೆ ಎಂದು ಗೌತಮ್ ಕುಮಾರ್ ತಿಳಿಸಿದರು.