ಬೆಂಗಳೂರು: ಮಾದಕ ವ್ಯಸನಿಗಳು ಬೆಂಗಳೂರಲ್ಲಿ ಗಾಂಜಾ ಕೃಷಿ (Ganja Farming In Bengaluru) ನಡೆಸಿದ್ದಾರೆ. ಅದೂ ನರಪಿಳ್ಳೆಯೂ ಸುಳಿಯದಂತ ಸ್ಮಶಾನದಲ್ಲಿ.. ನಿರ್ಜನ ಪ್ರದೇಶದಲ್ಲಿರೊ ಸ್ಮಶಾನವನ್ನೇ ಗಾಂಜಾ (Ganja) ಸೇದುವ ಅಡ್ಡವನ್ನಾಗಿ ಮಾಡ್ಕೊಂಡು ಜಾಂಜಾ ಕೃಷಿ ಮಾಡಿರುವ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
Advertisement
ಗಾಂಜಾ ಖರೀದಿ ಕಷ್ಟ ಅಂತ ಸ್ಮಶಾನದಲ್ಲಿ ಗಾಂಜಾ ಕೃಷಿ ಮಾಡ್ತಿದ್ದಾರ ವ್ಯಸನಿಗಳು? ಇದು ಯಾವುದೋ ದೂರದ ಊರಿನ ಸ್ಟೋರಿಯಲ್ಲ. ಸಿಲಿಕಾನ್ ಸಿಟಿಯದ್ದೇ ಕಥೆ. ಯಾವ ಏರಿಯಾಗೆ ಹೋದ್ರು, ಗಾಂಜ ಘಾಟು ಇದ್ದೇ ಇದೆ. ಪೊಲೀಸರು (Bengaluru Police), ಸರ್ಕಾರ ಗಾಂಜಾ ನಿರ್ಮೂಲನೆಗೆ ಪಣ ತೊಟ್ಟು ನಿಂತಿದೆ. ಆದ್ರೂ ಗಾಂಜಾ ಘಾಟು ಮಾತ್ರ ಕಮ್ಮಿಯಾಗಿಲ್ಲ. ನಿನ್ನೆ ಮೊನ್ನೆ ರಿಲೀಸ್ ಆದ ಭೀಮಾ ಸಿನಿಮಾದ ಕಥಾವಸ್ತುವು ಇದೇ ವಿಷಯಕ್ಕೆ ಸಂಬಂಧಿಸಿದ್ದೇ ಆಗಿದೆ.
Advertisement
Advertisement
ಹೊರ ರಾಜ್ಯಗಳಿಂದ ನಗರಕ್ಕೆ ಗಾಂಜಾ ಸಪ್ಲೈ ಆಗುತ್ತೆ. ಪೆಡ್ಲರ್ ಗಳಿಂದ ಬರೋ ಗಾಂಜವನ್ನ ವ್ಯಸನಿಗಳಿಗೆ ತಲುಪಿಸೋದು ಒಂದು ಸವಾಲಿನ ಕೆಲಸ. ಇದೇ ಕಾರಣಕ್ಕೆ ಕೆಲವೊಂದಷ್ಟು ಜನ ಗಾಂಜಾ ಕೃಷಿಗೆ ಮುಂದಾಗಿದ್ದಾರೆ ಅನ್ನೋ ಅನುಮಾನ ಮೂಡಿದೆ. ಯಲಹಂಕ ಬಳಿಯ ಅಟ್ಟೂರು ಸ್ಮಶಾನದಲ್ಲಿ ಸದ್ದಿಲ್ಲದೇ ಗಾಂಜಾ ಕೃಷಿ ನಡೆದಿದ್ಯಾ ಅನ್ನೋ ಅನುಮಾನ ಅಲ್ಲಿನ ಗಾಂಜಾ ಗಿಡಗಳನ್ನ ಮೋಡಿದ್ರೆ ಮೂಡುತ್ತೆ. ಆಗೊಮ್ಮೆ ಈಗೊಮ್ಮೆ ಬರೋ ರುದ್ರಭೂಮಿ ಗಾಂಜಾವ್ಯಸನಿಗಳ ಅಡ್ಡೆಯಾಗಿದೆ ಅನ್ನೋದಕ್ಕೆ ಇಲ್ಲಿನ ಗಾಂಜ ಗಿಡಗಳೇ ಸಾಕ್ಷಿ. ಸ್ಮಶಾನದ ಎರಡು ರೌಂಡ್ ಹಾಕಿದ್ರೆ ಹತ್ತಾರು ಗಾಂಜಾ ಗಿಡಗಳ ಘಾಟು ಮೂಗಿ ರಾಚುತ್ತೆ. ಇನ್ನೂ ಸ್ಮಶಾನದ ಮೂಲೆ ಮೂಲೆ ಪರೀಕ್ಷೆ ಮಾಡಿದ್ರೆ ಅದೆಷ್ಟು ಗಾಂಜಾ ಗಿಡಗಳು ಕಾಣುತ್ತೋ ಗೊತ್ತಿಲ್ಲ. ಇನ್ನೂ ಸ್ಮಶಾನದಲ್ಲಿ ಗಾಂಜಾ ಸೇದುವಾಗ ಉದುರಿರೋ ಬೀಜದಿಂದ ಗಿಡ ಬೆಳದಿದ್ಯೋ ಇಲ್ಲ ಸ್ಮಶಾನ ಯಾರೂ ಬರೋಲ್ಲ ಅಂತ ಬೇಕೆಂದೇ ಗಾಂಜಾ ಕೃಷಿ ಮಾಡಿದ್ದಾರೊ ಗೊತ್ತಿಲ್ಲ.
Advertisement
ಯಾವಾಗ ʻಪಬ್ಲಿಕ್ ಟಿವಿʼಯಲ್ಲಿ ಈ ಬಗ್ಗೆ ವರದಿ ಬಿತ್ತರವಾಯ್ತೊ ಯಲಹಂಕ ಎಸಿಪಿ ನರಸಿಂಹಮೂರ್ತಿ ಹಾಗೂ ಇನ್ಸ್‌ಪೆಕ್ಟರ್ ಸುಧಾಕರ್ ರೆಡ್ಡಿ ಸ್ಮಶಾನಕ್ಕೆ ಭೇಟಿ ನೀಡಿ ಗಾಂಜಾ ಗಿಡಗಳನ್ನ ಸೀಜ್ ಮಾಡಿದ್ದಾರೆ. ಎನ್‌ಡಿಪಿಎಸ್ ಆಕ್ಟ್ ಅಡಿ ಕೇಸ್ ದಾಖಲು ಮಾಡಲಾಗಿದ್ದು, ಇನ್ನಾದ್ರು ಪೊಲೀಸರು ಈ ಗಾಂಜಾ ಕೃಷಿಗೆ ಮುಕ್ತಿ ನೀಡಿ ಗಾಂಜಾ ಕೃಷಿಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿದೆ.