ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಈಗ ಗಾಂಜಾ ವ್ಯಸನಿಗಳು ಬೀಡಾಗಿದೆ. ಇತ್ತೀಚೆಗೆ ತಾನೇ ಗಾಂಜಾ ಮತ್ತಿನಲ್ಲಿ ಪೇದೆಯೊಬ್ಬರಿಗೆ ಬ್ಲೇಡ್ ಹಾಕಿದ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಬೇರೆ ಊರುಗಳಿಂದ ಬಂದವರಿಗೆ ಗಾಂಜಾ ಮತ್ತಿನ ಆಟೋ ಚಾಲಕ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿರೋದು ಬೆಳಕಿಗೆ ಬಂದಿದೆ.
ಕಾರು ದುರಸ್ತಿಗಾಗಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದಿಂದ ಬಂದ ವ್ಯಕ್ತಿಗಳಿಗೆ ಸಾಗರ ರಸ್ತೆಯಲ್ಲಿ ಆಟೋ ಚಾಲಕನೊಬ್ಬ ಅಮಾನವೀಯವಾಗಿ ದೌರ್ಜನ್ಯ ನಡೆಸಿದ್ದಾನೆ. ಯಾವುದೇ ಕಾರಣ ಇಲ್ಲದೆ ಇವರಿದ್ದ ಕಾರನ್ನು ಬೆನ್ನತ್ತಿ ಬಂದು ತಡೆದು ನಿಲ್ಲಿಸಿ, ಅವಾಚ್ಯ ಪದಗಳಿಂದ ನಿಂದಿಸಿ, ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ಸಂಚಾರಿ ಠಾಣೆಗೆ ಮಾಹಿತಿ ಹಾಗೂ ದೌರ್ಜನ್ಯದ ವಿಡಿಯೋ ನೀಡಿದ್ರೂ ಇದೂವರೆಗೂ ಯಾವುದೇ ಕ್ರಮಕೈಗೊಂಡಿಲ್ಲ.
ಈ ಘಟನೆ ಹಿನ್ನೆಲೆಯಲ್ಲಿ ಬೇರೆ ಊರಿನವರು ಶಿವಮೊಗ್ಗಕ್ಕೆ ಬರಲು ಹೆದರುವಂತಾಗಿದೆ. ಗಾಂಜಾ ವ್ಯಸನ ಈ ಮಟ್ಟಿಗೆ ಬೆಳೆಯಲು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎನ್ನಲಾಗ್ತಿದೆ. ಪೊಲೀಸರು ಆದಷ್ಟು ಬೇಗ ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕುವ ಮೂಲಕ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv