ಮಂಗಳೂರು: ಕಳೆದ ರಾತ್ರಿ ಮಂಗಳೂರು ಹೊರವಲಯದ ಪರಂಗಿಪೇಟೆಯಲ್ಲಿ ಗ್ಯಾಂಗ್‍ವಾರ್ ನಡೆದಿದ್ದು, ಇಬ್ಬರು ರೌಡಿ ಶೀಟರ್‍ಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಹಳೇ ವೈಷಮ್ಯದಲ್ಲಿ ಎರಡು ರೌಡಿ ತಂಡಗಳ ನಡುವೆ ಮಾರಾಮಾರಿ ನಡೆದಿದ್ದು, 26 ವರ್ಷದ ಅಡ್ಯಾರು ನಿವಾಸಿ ಫಯಾಜ್ ಹಾಗೂ 24 ವರ್ಷದ ಝಿಯಾ ಕೊಲೆಯಾಗಿದ್ದಾರೆ. ಸುಮಾರು 11.30ರ ಹೊತ್ತಿಗೆ ಫಯಾಜ್ ತನ್ನ ಗೆಳೆಯರ ಜೊತೆಗೆ ನಿಂತಿದ್ದಾಗ ಇನ್ನೊಂದು ತಂಡ ಸುಮೋದಲ್ಲಿ ಆಗಮಿಸಿ ಐವರ ಮೇಲೆ ತಲವಾರ್‍ನಿಂದ ದಾಳಿ ನಡೆಸಿದೆ.
ಫಯಾಜ್ ಸ್ಥಳದಲ್ಲಿಯೇ ಮೃತಪಟ್ಟರೆ, ಝಿಯಾ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಉಳಿದಂತೆ ಫಜಲ್, ಮುಶ್ತಾಕ್, ಹಮೀಜ್ ಗಾಯಗೊಂಡಿದ್ದಾರೆ. ಕಂಕನಾಡಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಳೆ ವೈಷಮ್ಯವೇ ಈ ಕೊಲೆಗಳಿಗೆ ಕಾರಣ ಎನ್ನಲಾಗಿದೆ.
ಆರೋಪಿಗಳ ಪತ್ತೆಗೆ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.