ಸಿನಿಮಾ ಮತ್ತು ಕ್ರಿಕೆಟ್ (Cricket) ಪ್ರೇಮಿಗಳಿಗೆ ಸಿಹಿಸುದ್ದಿಯೊಂದು ದೊರೆತಿದ್ದು, ಅತೀ ಶೀಘ್ರದಲ್ಲೇ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಅವರ ಬಯೋಪಿಕ್ ಮೂಡಿ ಬರಲಿದೆ. ಗಂಗೂಲಿ ಬಯೋಪಿಕ್ (Biopic) ತಯಾರಾಗಲಿದೆ ಎಂದು ಹಲವು ತಿಂಗಳುಗಳಿಂದ ಸುದ್ದಿ ಹರಿದಾಡುತ್ತಿತ್ತು. ರಣಬೀರ್ ಕಪೂರ್ ಅವರು ಗಂಗೂಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು.
ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ ಗಂಗೂಲಿ ಪಾತ್ರವನ್ನು ರಣಬೀರ್ ಬದಲು ಆಯುಷ್ಮಾನ್ ಖುರಾನಾ (Ayushmann Koran) ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಐಶ್ವರ್ಯ ರಜನಿಕಾಂತ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ. ಈಗಾಗಲೇ ಚಿತ್ರದ ಕೆಲಸದಲ್ಲಿ ಐಶ್ವರ್ಯ ಬ್ಯುಸಿಯಾಗಿದ್ದಾರಂತೆ. ಆಯುಷ್ಮಾನ್ ಜೊತೆ ಮಾತುಕತೆಯೂ ಆಗಿದೆ. ಇದನ್ನೂ ಓದಿ: 69th National Film Award 2023: ಅತ್ಯುತ್ತಮ ಸಿನಿಮಾ, ರಾಕೆಟ್ರಿ ದಿ ನಂಬಿ ಎಫೆಕ್ಟ್
ಅಂದುಕೊಂಡಂತೆ ನಡೆದರೆ ಡಿಸೆಂಬರ್ ನಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಹಲವು ಭಾಷೆಗಳಲ್ಲಿ ಇದು ನಿರ್ಮಾಣವಾಗಲಿದೆ. ಈಗಾಗಲೇ ಆಯುಷ್ಮಾನ್ ಖುರಾನ್ ಕ್ರಿಕೆಟ್ ಕುರಿತಾಗಿ ತರಬೇತಿಯನ್ನೂ ಪಡೆಯುತ್ತಿದ್ದಾರೆ. ಗಂಗೂಲಿ ಅವರನ್ನು ಭೇಟಿ ಮಾಡಿ, ಅವರೊಂದಿಗೆ ಒಂದಷ್ಟು ಹೊತ್ತು ಸಮಯ ಕಳೆದಿದ್ದಾರೆ ಎನ್ನುವ ಮಾಹಿತಿಯೂ ಇದೆ.
ಕ್ರಿಕೆಟ್ ಮತ್ತು ಕ್ರಿಕೆಟ್ ಆಟಗಾರರ ಕುರಿತಾಗಿ ಈಗಾಗಲೇ ಹಲವು ಸಿನಿಮಾಗಳು ಬಂದಿವೆ. ಈ ಬಾರಿ ಗಂಗೂಲಿ ಕುರಿತಾದ ಸಿನಿಮಾವಾಗುತ್ತಿದೆ. ಲವ್ ರಂಜನ್ ಮತ್ತು ಅಂಕುರ್ ಗರ್ಗ್ ಈ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ಗಂಗೂಲಿಯ ಸಾಧನೆಯನ್ನು ತೆರೆಗೆ ತರಲಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]