ಕೊಪ್ಪಳ: ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ (Anjanadri Hill) ಹನುಮ ಮಾಲೆ ವಿಸರ್ಜನೆಗೆ ಆಗಮಿಸಿದ್ದ ಮಾಲಾಧಾರಿ ಯುವಕ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಫೋಟೋ ಹಿಡಿದು ಬಂದಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕೋಳಿವಾಡ ಗ್ರಾಮದ ಯುವಕ ರಾಜು ಹನುಮ ಮಾಲೆ ಹಾಕಿಕೊಂಡು ಬಿಷ್ಣೋಯ್ ಫೋಟೋ ಹಿಡಿದು ಬಂದಿರುವುದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.
ರಾಜು ತಾನು ಲಾರೆನ್ಸ್ ಬಿಷ್ಣೋಯ್ ಅಭಿಮಾನಿ ಎಂದು ಹೇಳಿಕೊಂಡಿದ್ದು, ಬಿಷ್ಣೋಯ್ ಅವರಿಂದ ದೇಶ ಉಳಿದಿದೆ ಎಂಬ ಮನೋಭಾವ ನಮ್ಮದು ಎಂದು ಹೇಳಿದ್ದಾನೆ. ಇದೀಗ ಯುವಕ ಬಿಷ್ಣೋಯ್ ಹಿಡಿದಿರುವುದು ವೈರಲ್ ಆಗಿದೆ.

