– ವೈದ್ಯಕೀಯ ಪರೀಕ್ಷೆ ವರದಿ ಬಹಿರಂಗ
ನವದೆಹಲಿ: ಗ್ಯಾಂಗಸ್ಟರ್, ಪಾತಕಿ ಹಾಗೂ ಮಾಜಿ ಸಂಸದ ಅತೀಕ್ ಅಹ್ಮದ್ (Atiq Ahmed) ತಲೆಗೆ ಒಂದು ಗುಂಡು ಸೇರಿದಂತೆ ದೇಹವನ್ನು 9 ಗುಂಡುಗಳು ಹೊಕ್ಕಿವೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ.
Advertisement
Advertisement
ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಗ್ಯಾಂಗ್‌ಸ್ಟರ್ ದೇಹದಲ್ಲಿ ಕನಿಷ್ಠ 9 ಬುಲೆಟ್ ಹೊಕ್ಕಿದ್ದವು. ಆತನ ಸಹೋದರ ಅಶ್ರಫ್ ಅಹ್ಮದ್ ದೇಹದಿಂದ 5 ಗುಂಡುಗಳನ್ನು ಹೊರತೆಗೆಯಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಹಂತಕರು ಜೈಲಿಗೆ
Advertisement
ಅತೀಕ್ ಅಹ್ಮದ್ ತಲೆಗೆ ಒಂದು, ಎದೆ ಹಾಗೂ ಬೆನ್ನಿನ ಭಾಗಕ್ಕೆ ಎಂಟು ಬಾರಿ ಗುಂಡು ಹಾರಿಸಿರುವುದು ಶವಪರೀಕ್ಷೆಯಲ್ಲಿ ಪತ್ತೆಯಾಗಿದೆ. ಮೂವರು ಶೂಟರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಐವರು ವೈದ್ಯರಿದ್ದ ತಂಡ ಮರಣೋತ್ತರ ಪರೀಕ್ಷೆ ನಡೆಸಿದೆ.
Advertisement
ಉಮೇಶ್ ಪಾಲ್ ಹತ್ಯೆ ಆರೋಪ ಪ್ರಕರಣದಲ್ಲಿ ಅತೀಕ್ ಅಹ್ಮದ್‌ನನ್ನು ಬಂಧಿಸಲಾಗಿತ್ತು. ಪ್ರಯಾಗ್‌ರಾಜ್‌ನ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಪೊಲೀಸರು ಕರೆತಂದಿದ್ದ ವೇಳೆ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದನ್ನೂ ಓದಿ: ಪೊಲೀಸರ ಕಸ್ಟಡಿಯಲ್ಲಿದ್ದಾಗಲೇ ರೌಡಿ ಅತಿಕ್ ಅಹ್ಮದ್, ಸಹೋದರ ಗ್ಯಾಂಗ್‌ವಾರ್‌ಗೆ ಬಲಿ
ಪತ್ರಕರ್ತರ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಅತೀಕ್ ಅಹ್ಮದ್‌ಗೆ ಮೊದಲು ತಲೆಗೆ ಗುರಿಯಿಟ್ಟು ಗುಂಡು ಹೊಡೆದರು. ನಂತರ ಆತನ ಸಹೋದರನಿಗೂ ಗುಂಡು ಹಾರಿಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ತಕ್ಷಣ ಎಚ್ಚೆತ್ತ ಪೊಲೀಸರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದರು. ಅಷ್ಟರಲ್ಲಾಗಲೇ ಪಾತಕಿ ಅಹ್ಮದ್ ಮೇಲೆ ಹಲವು ಸುತ್ತಿನ ಗುಂಡು ಹಾರಿಸಲಾಗಿತ್ತು. ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದರು.