– ರಾಜ್ಯ ಸರ್ಕಾರ V/S ರಾಜಭವನದ ಸಂಘರ್ಷ ತಾರಕಕ್ಕೆ
ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಾದ ಹೊತ್ತಲ್ಲೇ, ಕಾಕತಾಳಿಯ ಎಂಬಂತೆ ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ (Gangenahalli Denotification Case) ಸಂಬಂಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯನ್ನು (HD Kumaraswamy) ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿದ್ರು.
Advertisement
ಲೋಕಾಯುಕ್ತ (Karnataka lokayukta) ನೊಟೀಸ್ ಹಿನ್ನೆಲೆಯಲ್ಲಿ ದೆಹಲಿಯಿಂದ ಸಂಜೆ ಬೆಂಗಳೂರಿಗೆ ಬಂದಿಳಿದ ಕೇಂದ್ರ ಸಚಿವರು, ನೇರವಾಗಿ ಲೋಕಾಯುಕ್ತ ಕಚೇರಿಗೆ ತೆರಳಿ 1 ಗಂಟೆ ವಿಚಾರಣೆ ಎದುರಿಸಿದ್ರು. ಇದನ್ನೂ ಓದಿ: Bengaluru | ಬಿಎಂಟಿಸಿ ಬಸ್‌ಗೆ ಮತ್ತೊಂದು ಜೀವ ಬಲಿ – ದ್ವಿಚಕ್ರವಾಹನ ಸವಾರ ಸ್ಥಳದಲ್ಲೇ ಸಾವು!
Advertisement
ನಾನು ಅಧಿಕಾರದಲ್ಲಿದ್ದಾಗ ಯಾವುದೇ ತಪ್ಪುಮಾಡಿಲ್ಲ. ಸ್ವಯಂಪ್ರೇರಣೆಯಿಂದಲೇ ವಿಚಾರಣೆಗೆ ಹಾಜರಾಗಿದ್ದೇನೆ. ಮತ್ತೆ ವಿಚಾರಣೆಗೆ ಕರೆದಿಲ್ಲ ಅಂದ್ರು. ಕಳೆದ ವಾರವಷ್ಟೇ ಇದೇ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ರು. ಬಿಎಸ್‌ವೈ ಸುಮಾರು 3 ಗಂಟೆಗಳ ಕಾಲ ವಿಚಾರಣೆ ಎದುರಿದ್ದರು.
Advertisement
Advertisement
ರಾಜ್ಯ ಸರ್ಕಾರ V/S ರಾಜಭವನ ಸಂಘರ್ಷ ಜೋರು:
ರಾಜ್ಯ ಸರ್ಕಾರ ಹಾಗೂ ರಾಜಭವನದ ನಡುವಿನ ಸಂಘರ್ಷ ತಾರಕಕ್ಕೇರಿದೆ. ಮಾಹಿತಿ ಸೋರಿಕೆ ವಿಚಾರವಾಗಿ ರಾಜಭವನದ ಮೇಲೆಯೇ ಸಂಶಯ ವ್ಯಕ್ತಪಡಿಸಿದೆ. ಈ ಹೊತ್ತಲ್ಲೇ, ರಾಜಭವನದ ಅಧಿಕಾರಿಗಳ ವಿರುದ್ಧ ತನಿಖೆ ಕೋರಿ ಡಿಜಿ-ಐಜಿಪಿಗೆ ಲೋಕಾಯುಕ್ತ ಐಜಿಪಿ ಚಂದ್ರಶೇಖರ್ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರಿದ್ದ ವಿಮಾನ ಟೇಕಾಫ್ ಆಗ್ತಿದ್ದಂತೆಯೇ ಸೆಕ್ಸ್ ಶುರು ಹಚ್ಕೊಂಡ ಜೋಡಿಗೆ ಕೋರ್ಟ್ ಶಿಕ್ಷೆ
ಆಗಸ್ಟ್ 20ರಂದು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಪತ್ರ ಬರೆದಿದ್ದ ರಾಜ್ಯಪಾಲರು, ಮಾಹಿತಿ ಸೋರಿಕೆ ಬಗ್ಗೆ ವರದಿ ಕೇಳಿದ್ದರು. ಹೀಗಾಗಿ ಈ ಬಗ್ಗೆ ಆಂತರಿಕ ತನಿಖೆ ನಡೆಸಿದ್ದ ಲೋಕಾಯುಕ್ತ ಸಂಸ್ಥೆ, ಮಾಹಿತಿ ಸೋರಿಕೆಯಲ್ಲಿ ಎಸ್‌ಐಟಿ ಪಾತ್ರ ಇಲ್ಲ ಎಂದು ವರದಿ ನೀಡಿದೆ. ಜೊತೆಗೆ, ರಾಜಭವನದ ಸಿಬ್ಬಂದಿಯ ತನಿಖೆ ನಡೆಸಲು ಅನುಮತಿ ನೀಡುವಂತೆ ಕೋರಿದೆ. ಇದು ಚರ್ಚೆಗೆ ಗ್ರಾಸವಾಗಿದೆ. ರಾಜಭವನದ ಮೇಲೆ ಸಮರ ಸಾರಿರೋ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ. ಆದ್ರೆ, ರಾಜಭವನದಿಂದಲೇ ಮಾಹಿತಿ ಸೋರಿಕೆ ಆಗಿರಬಹುದು ಎಂದು ಗೃಹ ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಭಾರತ-ಬಾಂಗ್ಲಾ 2ನೇ ಟೆಸ್ಟ್ ಪಂದ್ಯಕ್ಕೆ ಮಳೆ ಕಾಟ – ಮೊದಲ ದಿನದಂತ್ಯಕ್ಕೆ ಬಾಂಗ್ಲಾದೇಶ 107ಕ್ಕೆ 3 ವಿಕೆಟ್