ಬೆಂಗಳೂರು: 50 ನೇ ವಯಸ್ಸಲ್ಲೂ 15ರ ಹದಿಹರೆಯದ ಹುಡುಗಿಯಂತೆ ಹಾಡಿ ನೋಡುಗರನ್ನ ಮಂತ್ರ ಮುಗ್ದರನ್ನಾಗಿಸಿದ್ದಾರೆ. ಖಾಸಗಿ ಚಾನಲ್ ಅಲ್ಲಿ ಬರುವ ಸರಿಗಮಪ ಅಂಗಳದಲ್ಲಿ ಗಂಗಮ್ಮ ತಮ್ಮ ಹಂಗಾಮವನ್ನು ತೋರಿಸಿದ್ದಾರೆ.
ವಯಸ್ಸಾಗ್ತಿದೆ ಅನ್ನೋದನ್ನ ತಲೆಯಲ್ಲಿಟ್ಟುಕೊಳ್ಳದೇ ಕೆಲಸ ಮಾಡಿದರೆ ನಾವು ಅಂದುಕೊಂಡ ಗುರಿಯನ್ನ ಸಾಧಿಸಬಹುದು ಅನ್ನೋದಕ್ಕೆ ಕೊಪ್ಪಳ ಮೂಲದ ಗಂಗಮ್ಮ ಬೆಸ್ಟ್ ಎಕ್ಸಾಂಪಲ್ ಆಗಿದ್ದಾರೆ. ಸಂಗೀತ ಲೋಕದಲ್ಲಿ ಮಿಂಚ ಬೇಕು ಅಂತ ಭರ್ತಿ 20 ವರ್ಷಗಳಿಂದ ಪ್ರಯತ್ನ ಮಾಡುತ್ತಲೇ ಬಂದರು. ಕೊನೆಗೂ ಗಂಗಮ್ಮನ ದಶಕಗಳ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ. ಸರಿಗಮಪ ಸಿಂಗಿಂಗ್ ಶೋನಲ್ಲಿ ಸ್ಪರ್ಧೆ ಮಾಡುವುದಕ್ಕೆ ಅವಕಾಶ ಸಿಕ್ಕಿದೆ.
Advertisement
Advertisement
ಗ್ರಾಮೀಣ ಪ್ರತಿಭೆ ಗಂಗಮ್ಮನ ಗಾಯನಕ್ಕೆ ಇಡೀ ಕರುನಾಡೇ ಸಲಾಮ್ ಹೊಡೆದಿದೆ. 50ನೇ ವಯಸ್ಸಲ್ಲೂ 15ರ ಹದಿಹರೆಯದ ಹುಡುಗಿಯಂತೆ ಹಾಡುವ ಪರಿಗೆ ಕರುನಾಡ ಮಂದಿ ಕ್ಲೀನ್ ಬೋಲ್ಡ್ ಆಗಿದ್ದಾರೆ. `ಗಗನವೂ ಎಲ್ಲೋ ಭೂಮಿಯೂ ಎಲ್ಲೋ’ ಅಂತ ಹಾಡುತ್ತಾ ಸರಿಗಮಪ ವೇದಿಕೆ ಪ್ರವೇಶಿಸಿದ್ದ ಗಂಗಮ್ಮ, `ಬಾಳ ಬಂಗಾರ ನೀನು ಹಣೆಯ ಸಿಂಗಾರ ನೀನು’ ಹಾಡಿಗೆ ಧ್ವನಿಯಾಗಿ ಸಂಗೀತ ಲೋಕದ ದಿಗ್ಗಜರಾದ ಹಂಸಲೇಖ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಮತ್ತು ರಾಜೇಶ್ ಕೃಷ್ಣನ್ ಅವರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
Advertisement
ಗಂಗಮ್ಮನಿಗೆ ಸಿಕ್ಕಿರುವಂತಹ ಗೋಲ್ಡನ್ ಆಪರ್ಚುನಿಟಿ ಬಹುಶಃ ಬೇರ್ಯಾರಿಗೂ ಅಷ್ಟು ಸುಲಭವಾಗಿ ಸಿಗೋದಿಲ್ಲ. ಆ ವೇದಿಕೆ ಹತ್ತೋಕೆ ವರ್ಷಗಳ ಕಾಲ ತಪಸ್ಸು ಮಾಡಿರುತ್ತಾರೆ. ಹಗಲು-ರಾತ್ರಿ ಎನ್ನದೇ ಸಂಗೀತಾಭ್ಯಾಸ ಮಾಡಿರುತ್ತಾರೆ. ಆದರೆ ಸಂಗೀತ ಸರಸ್ವತಿ ಗಂಗಮ್ಮನನ್ನ ಕಾವಲು ಕಾಯುತ್ತಿರುವುದರಿಂದಲೇ ಹಳ್ಳಿಕೋಗಿಲೆಗೆ ಇಂತಹದ್ದೊಂದು ಸುವರ್ಣಾವಕಾಶ ಹುಡುಕಿಕೊಂಡು ಬರುವುದಕ್ಕೆ ಸಾಧ್ಯವಾಗಿದೆ.
ಕಲೆಗೆ ಬೆಲೆ ಸಿಕ್ಕೆ ಸಿಗುತ್ತೆ ಅನ್ನೋದು ಗಂಗಮ್ಮನಿಂದ ನಿಜವಾಗಿದೆ. ಸದ್ಯ ಸರಿಗಮಪ ಅಂಗಳದಲ್ಲಿ ಬೀಡುಬಿಟ್ಟಿರುವ ಗಂಗಮ್ಮ ಇಡೀ ಕರುನಾಡು ಬೆರಗುಗಣ್ಣಿನಿಂದ ನೋಡುವಂತೆ ಹಾಡಲಿ. ಹುಟ್ಟೂರು ಕೊಪ್ಪಳದ ಕೀರ್ತಿಪತಾಕೆಯನ್ನ ಎತ್ತಿಹಿಡಿಯಲಿ ಅನ್ನೋದೇ ಎಲ್ಲರ ಆಶಯವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv