ಕಲಬುರಗಿ: ಅಶರೀರವಾಣಿ ಮೂಲಕ ಗುರು ಪ್ರೇರಣೆಯಾದ ಹಿನ್ನಲೆ ಮುಚ್ಚಿದ ಗವಿಯೊಳಗೆ ಸ್ವಾಮೀಜಿಯೊಬ್ರು 41 ದಿನ ಕಠಿಣ ವೃತ ಕೈಗೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಅಫಜಲಪುರ ತಾಲೂಕಿನ ಶಿವೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಅಚಲ ಸನಾತನ ವಿಶ್ವ ಯೋಗಾಶ್ರಮದ ಗಂಗಾಧರಯ್ಯ ಶ್ರೀಗಳು ಈ ವೃತ ಕೈಗೊಂಡಿದ್ದಾರೆ. ಭಾನುವಾರ ಸಂಜೆಯಿಂದ ವೃತ ಆರಂಭವಾಗಿದ್ದು, ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರೀಗಳು ಗುಹೆ ಸೇರಿದ್ದಾರೆ.
ಖುದ್ದು ಭಕ್ತರೇ ಗುಹೆಯನ್ನ ಸಂಪೂರ್ಣ ಸಿಮೆಂಟ್ ಮತ್ತು ಇಟ್ಟಿಗೆಗಳಿಂದ ಪ್ಲಾಸ್ಟರ್ ಮಾಡಿದ್ದಾರೆ. ಆರಂಭದಲ್ಲಿ ಇಂತಹ ವೃತ ಬೇಡ ಅಂತ ಭಕ್ತರು ಮನವಿ ಮಾಡಿದ್ರು. ಆದ್ರೆ ಲೋಕ ಕಲ್ಯಾಣಕ್ಕಾಗಿ ನಾನು ಈ ವೃತ ಮಾಡುವಂತೆ ನನ್ನ ಗುರು ಪ್ರೇರಣೆಯಾಗಿದೆ ಅಂತ ಶ್ರೀಗಳು ತಿಳಿಸಿದ್ದಾರೆ. ಹೀಗಾಗಿ ಶಿವೂರು ಗ್ರಾಮದಲ್ಲೀಗ ಅಚ್ಚರಿಯ ಪವಾಡ ನೋಡಲು ಜನ ಜಾತ್ರೆಯಂತೆ ಬರ್ತಿದ್ದಾರೆ.