ಬೆಂಗಳೂರು: ನಗರದಲ್ಲಿ ಖತಾರ್ನಾಕ್ ಗ್ಯಾಂಗ್‍ವೊಂದು ಆಕ್ಟಿವ್ ಆಗಿದೆ. ಐಷಾರಾಮಿ ಮನೆಗಳೇ ಇವರೇ ಟಾರ್ಗೆಟ್. ಯಾರ್ ಮನೆ ಬೇಕಾದ್ರೂ ಖಾಲಿ ಮಾಡಿಸ್ತಾರೆ. ಯಾವ್ ಮನೆ ಬೇಕಾದ್ರು ದರೋಡೆ ಮಾಡ್ತಾರೆ. ಇದರ ಪ್ರಮುಖ ಪಾತ್ರಧಾರಿನೇ ಈ ಗೂಬೆ. ಗೂಬೆಯನ್ನು ಹೇಗೆಲ್ಲಾ ಬಳಸಿಕೊಳ್ತಾರೆ ಅನ್ನೋದನ್ನ ಕೇಳಿದ್ರೆ ಶಾಕ್ ಆಗ್ತೀರ.
Advertisement
ಹೌದು. ಇಂತದ್ದೊಂದು ಇಂಟಿಸ್ಟಿಂಗ್ ಸ್ಟೋರಿ ಬೆಂಗಳೂರಿನ ಕಾಟನ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಕಾಟನ್ ಪೇಟೆಯ ಕೆಲ ಹಣವಂತ ಸೇಟುಗಳನ್ನು ಟಾರ್ಗೆಟ್ ಮಾಡುತ್ತಿದ್ದ ತಂಡವೊಂದು, ದೂರದ ಕಾಡುಗಳಿಂದ ಗೂಬೆಗಳನ್ನು ಹಿಡಿದು ತಂದು ಮನೆಯವರಿಗೆ ಗೊತ್ತಾಗದ ಹಾಗೇ ಒಳಗೆ ಬಿಡ್ತಾರೆ. ನಂತರ ಅವರೇ ಹೋಗಿ ನಿಮ್ಮ ಮನೆಗೆ ಗೂಬೆ ನುಗ್ಗಿದೆ. ಅದು ಅನಿಷ್ಟದ ಸಂಕೇತ. ಅದಷ್ಟು ಬೇಗ ಮನೆ ಖಾಲಿ ಮಾಡಿ. ಇಲ್ಲ ಅಂದ್ರೆ ಕುಟುಂಬ ಸಮೇತ ದೇವಸ್ಥಾನಕ್ಕೆ ಹೋಗಿ ಬನ್ನಿ ಅಂತಾರೆ. ಅವರ ಮಾತನ್ನು ನಂಬಿ ದೇವಸ್ಥಾನಕ್ಕೆ ಹೋದ್ರೆ ಆ ಮನೆ ರಾತ್ರೋ ರಾತ್ರಿ ದರೋಡೆ ಆಗಿರುತ್ತೆ.
Advertisement
Advertisement
Advertisement
ಒಂದು ವೇಳೆ ಮನೆ ಮಾರಾಟ ಮಾಡಬೇಕು ಅನ್ನಿಸಿದ್ರೆ ಅದಕ್ಕೂ ಈ ಖತಾರ್ನಾಕ್ ಗ್ಯಾಂಗ್ ರೆಡಿ ಇರುತ್ತೆ. ಒಂದು ಕೋಟಿ ಮನೆಯನ್ನು 60 ಲಕ್ಷಕ್ಕೆ ಮಾರಿಬಿಡಿ ಅಂತಾ ಭಯಪಡಿಸಿ ಮನೆ ಮಾರಾಟ ಮಾಡಿ ಎಸ್ಕೇಪ್ ಆಗ್ತಾರೆ. ಯಾವುದೇ ಮನೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಅಣ್ಣ ತಮ್ಮ, ಸಂಬಂಧಿಗಳ ಮಧ್ಯೆ ಗಲಾಟೆ ಇದ್ರೆ ಇವರಿಗೆ ಡೀಲ್ ಕೊಟ್ರೆ ಇದೇ ಉಪಾಯ ಮಾಡಿ ಡೀಲ್ ಮಾಡಿ ಕೊಡ್ತಾರೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಐಡಿ ಫಾರೆಸ್ಟ್ ಡಿರ್ಪಾಟ್‍ಮೆಂಟ್ ದಾಳಿ ನಡೆಸಿ ಗೂಬೆ ಸೇರಿದಂತೆ ಐವರನ್ನು ಅರೆಸ್ಟ್ ಮಾಡಿ ಕಾಟನ್ ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ತನಿಖೆ ಮುಂದುವರೆಸಿದ್ದು, ಈ ಗೂಬೆಯ ಆಟಕ್ಕೆ ಯಾರೆಲ್ಲಾ ಬಲಿಯಾಗಿದ್ದಾರೆ ಅನ್ನೋದು ತಿಳಿಯಬೇಕಿದೆ.