ಚೆನ್ನೈ: ವ್ಯಕ್ತಿಯೊಬ್ಬನನ್ನು ಕೊಂದು, ಆತನ ಶವದೊಂದಿಗೆ ಸೆಲ್ಫಿ ತೆಗೆದುಕೊಂಡ ಘಟನೆ ಚೆನ್ನೈನ ನ್ಯೂ ಮನಾಲಿ ಪಟ್ಟಣದ ಸಮೀಪ ನಡೆದಿದೆ.
ರಿಕ್ಷಾ ಚಾಲಕ ರವಿಚಂದ್ರನ್(32) ಮೃತ ದುರ್ದೈವಿ. ಮದನ್ ಕುಮಾರ್(31), ಧನುಷ್(19), ಜಯಪ್ರಕಾಶ(18), ಭರತ್(19) ಬಂಧಿತ ಆರೋಪಿಗಳು. ಈ ನಾಲ್ವರು ಸೇರಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ರವಿಚಂದ್ರನ್ ಅವರನ್ನು ಕೊಲೆ ಮಾಡಿದ್ದಾರೆ. ನಂತರ ತಾವು ಕೊಲೆ ಮಾಡಿರುವುದಾಗಿ ಸ್ನೇಹಿತರಿಗೆ ಸಾಬೀತಪಡಿಸಲು ರವಿಚಂದ್ರನ್ ಶವದೊಂದಿಗೆ ಸೆಲ್ಫಿ ತೆಗೆದುಕೊಂಡಿದುಕೊಂಡು ವಾಟ್ಸ್‌ಪ್ ಗ್ರೂಪ್‌ಗೆ ಹರಿಬಿಟ್ಟು ವಿಕೃತಿ ಮೆರೆದಿದ್ದಾರೆ.
Advertisement
Advertisement
ರವಿಚಂದ್ರನ್ ಕೆಲ ದಿನಗಳ ಹಿಂದೆ ಮದನ್ ಜೊತೆಗೆ ಜಗಳ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಮದನ್ ಹಾಗೂ ಆತನ ಸ್ನೇಹಿತರು ಸೇರಿ ರವಿಚಂದ್ರನ್ ಅವರನ್ನು ಕೊಲೆ ಮಾಡಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದರು.
Advertisement
ಪ್ಲ್ಯಾನ್ ಪ್ರಕಾರವಾಗಿ ರವಿಚಂದ್ರನ್ ಅವರಿಗೆ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ನ್ಯೂ ಮನಾಲಿ ಪಟ್ಟಣದ ಆಟದ ಮೈದಾನದಲ್ಲಿ ಮದ್ಯದ ಪಾರ್ಟಿಗಾಗಿ ಮದನ್ ಆಹ್ವಾನಿಸಿದ್ದ. ಇದಕ್ಕೆ ಒಪ್ಪಿದ್ದ ರವಿಚಂದ್ರನ್ ಪಾರ್ಟಿಗೆ ಹೋಗಿದ್ದ. ನಂತರ ಮದನ್ ಹಾಗೂ ಸ್ನೇಹಿತರು ಸೇರಿ ಮದ್ಯದ ಬಾಟಲಿಯಿಂದ ರವಿಚಂದ್ರನ್ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾರೆ.
Advertisement
ರಾತ್ರಿಯಾದರೂ ಬರದಿದ್ದರಿಂದ ರವಿಚಂದ್ರನ್ ಪತ್ನಿ ಕೀರ್ತನಾ, ರವಿಚಂದ್ರನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಸ್ವಿಚ್ ಆಫ್ ಆಗಿತ್ತು. ಇದರಿಂದ ಗಾಬರಿಗೊಂಡ ಅವಳು ರವಿಚಂದ್ರನ್ ಅವರನ್ನು ಹುಡುಕಲು ಸಂಬಂಧಿಕರಿಗೆ ತಿಳಿಸಿದರು. ನಂತರ ವೆಟ್ರಿ ನಗರದ ಎಂಆರ್‍ಎಫ್ ಆಟದ ಮೈದಾನದ ಮೂಲೆಯಲ್ಲಿ ಆತ ಶವವಾಗಿ ಬಿದ್ದಿರುವುದು ಕಂಡಿದೆ. ಇದನ್ನೂ ಓದಿ: ಬಿಜೆಪಿ ನಾಯಕರೇ ಅಮಿತ್ ಶಾ ಗುಲಾಮರಾಗಬೇಡಿ, ಕನ್ನಡ ತಾಯಿ ಸ್ವಾಭಿಮಾನಿ ಮಕ್ಕಳಾಗಿ: ಸಿದ್ದು
ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದ ರವಿಚಂದ್ರನ್ ಪತ್ನಿ ಕೀರ್ತನಾ ಆವಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಟಾನ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ.
ಕೀರ್ತನಾ ಅವರ ದೂರಿನ ಆಧಾರದ ಮೇಲೆ, ಆವಡಿಯ ಪೊಲೀಸ್ ಕಮಿಷನರ್ ಸಂದೀಪ್ ರೈ ರಾಥೋಡ್ ಅವರು ವಿಶೇಷ ತಂಡಗಳನ್ನು ರಚಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖಾಧಿಕಾರಿಯೊಬ್ಬರ ಪ್ರಕಾರ, ಸೆಲ್ಫಿ ಕೊಲೆಗಾರರನ್ನು ಗುರುತಿಸಲು ಸಹಾಯ ಮಾಡಿದೆ. ಇದನ್ನೂ ಓದಿ: ಮತ್ತೆ ಗಲಭೆಕೋರರ ಪರ ನಿಂತ ಜಮೀರ್- ಕಲ್ಲು ಹೊಡೆದವರ ಕುಟುಂಬಕ್ಕೆ 5 ಸಾವಿರ, ಫುಡ್‍ಕಿಟ್