ಚೆನ್ನೈ: ಆಂಧ್ರ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ತಮಿಳುನಾಡಿನ ತಿರುವನ್ನಮಲೈನ ಜಿಲ್ಲಾ ಪೂರ್ವ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಕಾನ್ಸ್ಟೇಬಲ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.
25 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಕಾನ್ಸ್ಟೇಬಲ್‌ಗಳಾದ ಸುಂದರ್ ಮತ್ತು ಸುರೇಶ್ ರಾಜ್‌ರನ್ನು ಬಂಧಿಸಿ, ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಾಮನಗರ ಸರಣಿ ಅಪಘಾತ; ಟೆಂಪೋ ಚಾಲಕ ಸಾವು, ಐವರಿಗೆ ಗಂಭೀರ ಗಾಯ
ಯುವತಿಯು, ಆಕೆಯ ತಾಯಿಯೊಂದಿಗೆ ಆಂಧ್ರಪ್ರದೇಶದಿಂದ ತಿರುವನ್ನಮಲೈಗೆ ಹಣ್ಣುಗಳನ್ನು ಮಾರಾಟ ಮಾಡಲು ಪ್ರಯಾಣಿಸಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್‌ಗಳು ವಾಹನವನ್ನು ತಡೆದು, ತಪಾಸಣೆ ಮಾಡಿದ್ದರು.
ಬಳಿಕ ಯುವತಿಯನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ ಎಂದು ಯುವತಿಯ ತಾಯಿಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರಿನಾಧಾರ ಇಬ್ಬರು ಪೊಲೀಸ್ ಕಾನ್ಸ್ಟೇಬಲ್‌ಗಳನ್ನು ಬಂಧಿಸಿ, ಕರ್ತವ್ಯದಿಂದ ಅಮಾನತು ಮಾಡಲಾಗಿದೆ.