ಕಾಮುಕರಿಂದ ತಪ್ಪಿಸಿಕೊಳ್ಳಲು 3ನೇ ಮಹಡಿಯಿಂದ ಹಾರಿದ್ಳು- ಹೈ ವೋಲ್ಟೆಜ್ ತಂತಿಯಲ್ಲಿ ಸಿಲುಕಿಕೊಂಡ ಬಾಲಕಿ!

Public TV
1 Min Read
RAPE 10

ಪಾಟ್ನಾ: ಒಂಬತ್ತನೇ ತರಗತಿ ವಿದ್ಯಾರ್ಥಿನಿಯ ಮೇಲೆ ಸಾಮಾಹಿಕ ಅತ್ಯಾಚಾರ ನಡೆದಿದ್ದು, ಈ ವೇಳೆ ಕಾಮುಕರಿಂದ ತಪ್ಪಿಸಿಕೊಳ್ಳಲು ಬಾಲಕಿ ಕಟ್ಟಡದಿಂದ ಜಿಗಿದ್ದಾಳೆ. ಪರಿಣಾಮ ಹೈ ವೋಲ್ಟೇಜ್ ವಿದ್ಯುತ್ ತಂತಿಗಳಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದಾಳೆ.

ಈ ಘಟನೆ ಬಿಹಾರದ ಲಖಿಸರಯಿ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಚಿತ್ರಂಜನ್ ಎಂಬಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಬಳಿಕ ಆಕೆ ಕಾಮುಕರಿಂದ ತಪ್ಪಿಸಿಕೊಳ್ಳಲು ಮೂರು ಅಂತಸ್ತಿನ ಕಟ್ಟಡದಿಂದ ಜಿಗಿದಿದ್ದಾಳೆ. ಪರಿಣಾಮ ಹೈ ವೋಲ್ಟೇಜ್ ತಂತಿ ಮೇಲೆ ಬಿದ್ದಿದ್ದು, ಸದ್ಯ ಬಾಲಕಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ ಅಂತ ಪೊಲೀಸ್ ಆಯುಕ್ತ ಕಾರ್ತಿಕ್ ಶರ್ಮಾ ತಿಳಿಸಿದ್ದಾರೆ.

RAPE 1 4

ಗುರುವಾರ ಬಾಲಕಿ ತನ್ನ ಸಹಪಾಠಿ ಜೊತೆ ದುರ್ಗಾ ನವಮಿ ಹಬ್ಬಕ್ಕೆ ತೆರಳಿದ್ದಾಳೆ. ಆದ್ರೆ ಆಕೆಗೆ ಕಟ್ಟಡದ 3ನೇ ಮಹಡಿಗೆ ಹೇಗೆ ಹೋಗಿರುವುದಾಗಿ ತಿಳಿದಿಲ್ಲ ಅಂತ ಶರ್ಮಾ ಹೇಳಿದ್ದಾರೆ.

ಕಾಮುಕರು ಬಾಲಕಿಗೆ ಒತ್ತಾಯಪೂರ್ವಕವಾಗಿ ಮತ್ತು ಬರುವ ಪಾನೀಯವನ್ನು ಕುಡಿಸಿದ್ದಾರೆ. ಪರಿಣಾಮ ಆಕೆ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದಾಳೆ. ಈ ವೇಳೆ ಆಕೆಯ ಮೇಲೆ ಅತ್ಯಾಚಾರ ನಡೆದಿದೆ. ಸ್ವಲ್ಪ ಸಮಯದ ಬಳಿಕ ಆಕೆಗೆ ಪ್ರಜ್ಞೆ ಬಂದಿದ್ದು, ಆಕೆ ಅರೆ ನಗ್ನವಾಗಿದ್ದಳು. ಇದರಿಂದ ಗಾಬರಿಗೊಂಡು ಮೂರನೇ ಮಹಡಿಯಿಂದ ಜಿಗಿದಿದ್ದಾಳೆ ಅಂತ ಅವರು ತಿಳಿಸಿದ್ದಾರೆ.

RAPE 2 2

ಘಟನೆಯಿಂದ ಬಾಲಕಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಬಾಲಕಿ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನಲ್ಲಿ ಸುಧಾರಣೆಯಾದ ಬಳಿಕ ಆಕೆಯ ಬಳಿಯಿಂದ ಹೇಳಿಕೆ ಪಡೆದುಕೊಳ್ಳಲಾಗುವುದು ಅಂತ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಗೆಳತಿ, ಕಟ್ಟಡದ ಮಾಲೀಕ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೇ ಕಟ್ಟಡದಲ್ಲಿದ್ದ ಬಾಲಕಿಯ ಬಟ್ಟೆ, ಆಲ್ಕೋಹಾಲ್ ಬಾಟಲಿ ಹಾಗೂ ಗ್ಲಾಸ್ ಗಳನ್ನು ವಶಪಡಿಸಿಕೊಂಡಿದ್ದಾರೆ.

RAPE 3 2

ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪ್ರತಿಭಟನೆಗಳು ನಡೆದವು. 100ಕ್ಕೂ ಹೆಚ್ಚು ಮಂದಿ ರಸ್ತೆ ತಡೆದು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *