ಬೆಂಗಳೂರು: ಗಂಗಗೊಂಡನಹಳ್ಳಿಯಲ್ಲಿರುವ ಮನೆಗೆ ನುಗ್ಗಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಕಾಮುಕರನ್ನ ಮಾದಕನಾಯಕನ ಹಳ್ಳಿ ಪೊಲೀಸರು (Madanayakahalli Police) ಬಂಧಿಸಿದ್ದಾರೆ.
ಘಟನೆ ನಡೆದ 24 ಗಂಟೆಯ ಒಳಗಾಗಿ ಮೂವರು ಕಾಮುಕರನ್ನ ಬಂಧಿಸಲಾಗಿದೆ. ಕಾರ್ತಿಕ್, ಗ್ಲೇನ್, ಸಯೋಗ ಬಂಧಿತ ಕಾಮುಕರು. ಸದ್ಯ ಬಂಧವಾಗಿರುವ ಆರೋಪಿ (Accused) ಕೃತ್ಯ ನಡೆದ ಅಕ್ಕಪಕ್ಕದ ಏರಿಯಾದವರೇ ಆಗಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ತಿಗಣೆ ಔಷಧಿ ವಾಸನೆಗೆ ಬಿಟೆಕ್ ವಿದ್ಯಾರ್ಥಿ ಬಲಿ
ಪ್ಲ್ಯಾನ್ ಮಾಡಿಕೊಂಡೇ ಕೃತ್ಯ
ಇನ್ನು ಕಾಮುಕರು ಪ್ಲ್ಯಾನ್ ಮಾಡಿಕೊಂಡೇ ಕೃತ್ಯ ಎಸಗಿರೋದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಗಳು ಮೊದಲು ಮನೆಯಲ್ಲಿದ್ದ ಇಬ್ಬರು ಪುರಷರ ಮೇಲೆ ಹಲ್ಲೆ ಮಾಡಿ ಕಟ್ಟಿಹಾಕಿದ್ದಾರೆ. ಆ ಬಳಿಕ ಇದ್ದ ಐವರಲ್ಲಿ ಮೂವರು ಮನೆ ಒಳಗಡೆ ಹೋಗಿ ಮಹಿಳೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಯ ಬಳಿ ಇದ್ದ ಮೊಬೈಲ್ ಹಾಗೂ 50 ಸಾವಿರ ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಘಟನೆ ಸಂಬಂಧ ಅತ್ಯಾಚಾರ ಹಾಗೂ ರಾಬರಿ ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದರು. ಕಾಮುಕರ ಹುಡುಕಾಟಕ್ಕೆ ಮೂರು ತಂಡಗಳನ್ನ ರಚಿಸಲಾಗಿತ್ತು. ಸದ್ಯ ಮೂವರನ್ನ ಬಂಧನ ಮಾಡಿದ್ದು ಉಳಿದು ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಖಾಸಗಿ ಭಾಗ ಮುಟ್ಟಿ, ರೂಮ್ ಬುಕ್ ಮಾಡಿದ್ದೇನೆ ಸಹಕರಿಸು ಅಂತಿದ್ದ – ಚಿಕಿತ್ಸೆಗೆ ಬಂದಿದ್ದ ಯುವತಿಗೆ ಕಿರುಕುಳ, ವೈದ್ಯ ಅರೆಸ್ಟ್
ಇನ್ನು ಕೀಚಕರ ಅಟ್ಟಹಾಸದಿಂದ ನಲುಗಿರೋ ಸಂತ್ರಸ್ತೆಗೆ ಚಿಕಿತ್ಸೆ ಕೊಡಿಸಲಾಗಿದ್ದು ಚೇತರಿಸಿಕೊಂಡಿದ್ದಾರೆ. ಸಂತ್ರಸ್ತೆ ಮನೆಯಲ್ಲಿದ್ದ ಇಬ್ಬರು ಪುರುಷರಿಗೆ ಬ್ಯಾಟ್‌ನಿಂದ ಗಂಭೀರವಾಗಿ ಹಲ್ಲೆ ಮಾಡಿದ್ದರಿಂದ ಇಬ್ಬರನ್ನೂ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಕರಣದ ಗಂಭೀರತೆ ಅರಿತ ಅಧಿಕಾರಿಗಳು ನೆಲಮಂಗಲ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಮಾಡಿಸಲು ಆದೇಶಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ ಸ್ಪಷ್ಟಪಡಿಸಿದ್ದಾರೆ.



