ಬೆಳಗಾವಿ: ರಾಜ್ಯ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದೆ ತಂದಿದ್ದು ಸರ್ಕಾರಿ ಬಸ್ಸುಗಳು ತುಂಬಿ ತುಳುಕುತ್ತಿವೆ. ಇದನ್ನೇ ದಾಳ ಮಾಡಿಕೊಂಡು ಬಸ್‌ನಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳಿಯರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ನಗರದ ವಡ್ಡರವಾಡಿಯ ಅನಿತಾ ಚೌಗಲೆ, ನಿಶಾ ಲೊಂಡೆ, ಗಿಡ್ಡಿ ಲೊಂಡೆ ಬಂಧಿತರು. ಇದನ್ನೂ ಓದಿ: ಕಾಳಿಂಗ ಸರ್ಪದೊಂದಿಗೆ ಕಾದಾಟ – ಮನೆ ಮಾಲೀಕರ ಜೀವ ಉಳಿಸಿ ಪ್ರಾಣ ಬಿಟ್ಟ ಶ್ವಾನ
ಬೆಳಗಾವಿಯ (Belagavi) ಕೇಂದ್ರ ಬಸ್ ನಿಲ್ದಾಣದಲ್ಲಿ ಸಕ್ರೀಯವಾಗಿದ್ದ ಕಳ್ಳಿಯರ ಗ್ಯಾಂಗ್ ಸದಸ್ಯರನ್ನು ಬೆಳಗಾವಿಯ ಮಾರ್ಕೆಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಸ್ ಹತ್ತುವಾಗ ಮತ್ತು ಇಳಿಯುವಾಗ ಮಹಿಳೆಯರ ಕತ್ತಲ್ಲಿದ್ದ ಬೆಲೆ ಬಾಳುವ ಬಂಗಾರದ ಒಡವೆಗಳನ್ನು ಕಳ್ಳಿಯರು ಕ್ಷಣಮಾತ್ರದಲ್ಲಿಯೇ ಎಗರಿಸುತ್ತಿದ್ದರು. ಇದನ್ನೂ ಓದಿ: 1 ಗ್ಯಾರಂಟಿಗೆ ಅರ್ಧ ಕೊಕ್ – ಬಡ ಮಹಿಳೆಯರಿಗೆ ಮಾತ್ರ ದುಡ್ಡು
ಹುಬ್ಬಳ್ಳಿ ಮೂಲದ ಕಾಂಚನಾ ಗೌಡರ ಎಂಬುವವರ ಚಿನ್ನದ ಸರ ಕಳ್ಳತನವಾಗಿತ್ತು. ಈ ಕುರಿತು ಕಾಂಚನಾ ಅವರು ಮಾರ್ಕೆಟ್ ಠಾಣೆಗೆ ದೂರು ನೀಡಿದ್ದರು. ದೂರನ್ನಾಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಸದ್ಯ ಮೂವರು ಖತರ್ನಾಕ್ ಕಳ್ಳಿಯರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ‘ಕಿಸ್ಸಿಕ್’ ಬೆಡಗಿಗೆ ಬೇಡಿಕೆ- ಬಹುಭಾಷೆಗಳಲ್ಲಿ ಶ್ರೀಲೀಲಾ ಬ್ಯುಸಿ
ಬಂಧಿತ ಆರೋಪಿಗಳಿಂದ ಸುಮಾರು 12 ಲಕ್ಷ 70 ಸಾವಿರ ರೂ. ಮೌಲ್ಯದ 143 ಗ್ರಾಂ ಚಿನ್ನದ ಒಡವೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.