ತುಮಕೂರು: ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಾಪುರ ಕ್ರಾಸ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯ ಪೇದೆ ನಾಗರಾಜು ಮೇಲೆ ಏಕಾಏಕಿ 6 ಜನ ಆರೋಪಿಗಳು ಹಲ್ಲೆ ಮತ್ತು ಪೊಲೀಸ್ (Police) ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
Advertisement
ಅಕ್ಕಿರಾಂಪುರ ಕುರಿ, ಮೇಕೆ ಸಂತೆಯು (Market) ಜಿಲ್ಲಾಧಿಕಾರಿಗಳ (DC) ಆದೇಶದ ಮೇರೆಗೆ ಶನಿವಾರದ ಸಂತೆಯನ್ನು ನಡೆಸದಂತೆ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಜಾಗೃತಿ ಮೂಡಿಸಲಾಗಿತ್ತು. ಅದರೆ ಎಂದಿನಂತೆ ಕುರಿ ಮೇಕೆ ವ್ಯಾಪಾರಸ್ಥರು ಬೊಲೆರೋ ವಾಹನದಲ್ಲಿ ಕುರಿ, ಮೇಕೆಗಳನ್ನು ಸಂತೆ ವ್ಯಾಪಾರಕ್ಕೆ ವಾಹನದಲ್ಲಿ ತುಂಬಿಕೊಂಡು ಅರಸಾಪುರ ಗ್ರಾಮದ ಕಡೆಯಿಂದ ಬೈಚಾಪುರ ಕಡೆಗೆ ವಾಹನದಲ್ಲಿ ಬರುತ್ತಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ವಾಹನವನ್ನು ತಡೆದು ವಾಪಸ್ ಕಳುಹಿಸಲು ಮುಂದಾದಾಗ ಏಕಾಏಕಿ 6 ಜನ ಆರೋಪಿಗಳು ಮುಖ್ಯಪೇದೆ ನಾಗರಾಜುರವರ ಮೇಲೆ ಹಲ್ಲೆಗೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಕೊನೆಗೂ ದರ ಇಳಿಸಿದ ಓಲಾ – ಕಿ.ಮೀಗೆ ಈಗ 35 ರಿಂದ 45 ರೂ.!
Advertisement
Advertisement
ಆರೋಪಿಗಳು ಮತ್ತು ಪೊಲೀಸರ ನಡುವೆ ಮಾತಿಗೆ ಮಾತು ಬೆಳೆದು ಪೊಲೀಸರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದವರು ಅರಸಾಪುರ ಅಗ್ರಹಾರ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳಾದ ಚನ್ನಪ್ಪ (54), ನರಸಿಂಹರಾಜು (28), ನವೀನ್ ಕುಮಾರ್ (28), ಲಕ್ಷ್ಮೀ ಪತಿ (26), ನಾಗೇಶ್ (22) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಎ1 ಆರೋಪಿ ತಲೆಮರೆಸಿಕೊಂಡಿದ್ದಾನೆ. ಇದನ್ನೂ ಓದಿ: ಪಟಾಕಿ ತಂದ ಆಪತ್ತು – ಮಕ್ಕಳ ಬಾಳಲ್ಲಿ ಕತ್ತಲೆ ತಂದ ಬೆಳಕಿನ ಹಬ್ಬ, 78 ಮಂದಿಗೆ ಗಾಯ