ಬೆಳಗಾವಿ: ಅಕ್ರಮವಾಗಿ ಚೀನಾಗೆ (China) ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ಖೆಡ್ಡಾಗೆ ಬೀಳಿಸಿರುವ ಭರ್ಜರಿ ಕಾರ್ಯಾಚರಣೆ ಜಿಲ್ಲೆಯ ಖಾನಾಪುರ (Khanapur) ಅರಣ್ಯದಲ್ಲಿ ನಡೆದಿದೆ.
ಭರ್ಜರಿ ಕಾರ್ಯಾಚರಣೆ ನಡೆಸಿದ ಅರಣ್ಯ ಅಧಿಕಾರಿಗಳು ಜೀವಂತ ಒಂದು ಚಿಪ್ಪು ಹಂದಿ, ಇಬ್ಬರು ಆರೋಪಿಗಳು ಅರೆಸ್ಟ್ ಮಾಡಿದ್ದಾರೆ.ಇದನ್ನೂ ಓದಿ: ಈ ಮೈಸೂರು ದಸರಾದ ಗಜಪಡೆ – ಅಭಿಮನ್ಯು & ಟೀಂ ಬಗ್ಗೆ ಇಲ್ಲಿದೆ ಫುಲ್ ಡಿಟೇಲ್ಸ್
Advertisement
Advertisement
ನಾಲ್ಕು ಜನ ಆರೋಪಿಗಳು ರೈಲು ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿರುವಾಗ ಕಂಡು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರು ವರ್ಷದ ನಾಲ್ಕೂವರೆ ಕೆಜಿ ತೂಕದ ಜೀವಂತ ಚಿಪ್ಪು ಹಂದಿಯನ್ನು ಅಧಿಕಾರಗಳು ವಶಕ್ಕೆ ಪಡೆದಿದ್ದಾರೆ.
Advertisement
ಖಾನಾಪುರ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ ಮಾತನಾಡಿ, ಚಿಪ್ಪು ಹಂದಿಯನ್ನು ಪುರುಷತ್ವ ಹೆಚ್ಚಿಸುವ ಔಷಧ ತಯಾರಿಕೆಗಾಗಿ ಬಳಸಲಾಗುತ್ತದೆ. ಇದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬಲು ಬೇಡಿಕೆ ಇದೆ. ಖಾನಾಪುರದಿಂದ ಚೀನಾವರೆಗೂ ಚಿಪ್ಪು ಹಂದಿಯನ್ನು ಸಾಗಾಟ ಮಾಡುತ್ತಿದ್ದು, ಸಾಗಾಟ ಜಾಲವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ ಎಂದರು.
Advertisement
ಖಾನಾಪುರದಿಂದ ಕಾರವಾರಕ್ಕೆ (Karwar) ಕಳಿಸಿ ಅಲ್ಲಿಂದ ಬೋಟ್ ಮೂಲಕ ಕೋಲ್ಕತ್ತಾಗೆ (Kolkatta) ಸಾಗಿಸುತ್ತಾರೆ. ಬಳಿಕ ಹಡಗಿನಲ್ಲಿ ಚೀನಾಕ್ಕೆ ಸಾಗಾಟ ಮಾಡುತ್ತಿದ್ದರು. ಸದ್ಯ ಚಿಪ್ಪು ಹಂದಿ ಸಾಗಾಟ ತಂಡದ ಶೋಧಕ್ಕಾಗಿ ಅಧಿಕಾರಿಗಳು ಬೆನ್ನು ಬಿದ್ದಿದ್ದಾರೆ. ಒಂದು ಪ್ರತ್ಯೇಕ ತಂಡ ರಚಸಿ ಕಳ್ಳಸಾಕಾಣೆ ತಂಡದ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ನವರಾತ್ರಿ ವಿಶೇಷ – 1 | ಕೋಲ್ಕತ್ತಾದ ಕುರ್ಮಾತುಲಿ ಪಾರ್ಕ್ ದುರ್ಗಾ ಪೆಂಡಾಲ್ ಮಹತ್ವದ ನಿಮಗೆ ಗೊತ್ತೆ?