ವಿಮಾನದಲ್ಲಿ ಬಂದು ದುಬಾರಿ ಸೀರೆ ಕದ್ದು ಪರಾರಿಯಾಗ್ತಿದ್ದ ಖತರ್ನಾಕ್ ಲೇಡಿ ಗ್ಯಾಂಗ್ ಅರೆಸ್ಟ್

Public TV
1 Min Read
ARREST 5

– ಸುಮಾರು 14 ಲಕ್ಷ ಮೌಲ್ಯದ ಸೀರೆ ಕಳ್ಳತನ

ಬೆಂಗಳೂರು: ಆಂಧ್ರ ಪ್ರದೇಶದಿಂದ (Andhra Pradesh) ವಿಮಾನದಲ್ಲಿ ಬಂದು ಸೀರೆ ಕಳ್ಳತನ ಮಾಡಿ ಮರಳುತ್ತಿದ್ದ ಖತರ್ನಾಕ್ ಲೇಡಿ ಗ್ಯಾಂಗ್‍ನ್ನು ಅಶೋಕ್ ನಗರ ಪೊಲೀಸರು (Police) ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಗುಂಟೂರು ಮೂಲದ ರಮಣ, ರತ್ನಾಲು, ಚುಕ್ಕಮ್ಮ ಎಂದು ಗುರುತಿಸಲಾಗಿದೆ. ಆರೋಪಿಗಳು ಗುಂಟೂರಿನಿಂದ ವಿಮಾನದಲ್ಲಿ ಬೆಂಗಳೂರಿಗೆ (Bengaluru) ಬರುತ್ತಿದ್ದರು. ಬಳಿಕ ಸ್ಕಾರ್ಪಿಯೋ ಕಾರಿನಲ್ಲಿ ಬೆಂಗಳೂರನ್ನು ಸುತ್ತುತ್ತಿದ್ದರು. ನಂತರ ಸೀರೆ ಕೊಂಡುಕೊಳ್ಳುವ ನೆಪದಲ್ಲಿ ಬಟ್ಟೆ ಅಂಗಡಿಗಳಿಗೆ ತೆರಳುತ್ತಿದ್ದರು. ಅಲ್ಲಿ ಅಂಗಡಿಯವರಿಗೆ ಯಾಮಾರಿಸಿ ದುಬಾರಿ ಸೀರೆಗಳನ್ನು ಕದ್ದು ಪರಾರಿಯಾಗುತ್ತಿದ್ದರು. ಇದನ್ನೂ ಓದಿ: ಸೊಸೆಯನ್ನು ರಕ್ಷಿಸಲು ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪತ್ನಿ!

ಕಳ್ಳಿಯರು ಶ್ರೀಮಂತರಂತೆ ಬಿಂಬಿಸಲು ಮೈತುಂಬಾ ಒಡವೆ ಹಾಕಿಕೊಂಡು ಅಂಗಡಿಗೆ ತೆರಳುತ್ತಿದ್ದರು. ಅಲ್ಲಿ ಲಕ್ಷಗಟ್ಟಲೆ ಬೆಲೆ ಬಾಳುವ ಸೀರೆ ತೋರಿಸುವಂತೆ ಕೇಳುತ್ತಿದ್ದರು. ಬಳಿಕ ಹತ್ತಾರು ಸೀರೆ ನೋಡಿ ಬೇರೆ ಸೀರೆ ತೋರಿಸಿ ಎಂದು ಹೇಳಿ, ಅಂಗಡಿಯವರು ಒಳಗಿಂದ ತರಲು ತೆರಳಿದಾಗ ಬಂಡಲ್‍ನ್ನೇ ಉಟ್ಟ ಸೀರೆಯಲ್ಲಿ ಮುಚ್ಚಿಟ್ಟುಕೊಂಡು ಪರಾರಿಯಾಗುತ್ತಿದ್ದರು.

ಹೀಗೆ ಪರಾರಿಯಾಗುವಾಗ ಸೆಕ್ಯೂರಿಟಿ ಒಬ್ಬರಿಗೆ ಮಹಿಳೆಯ ಕಾಲಿನ ಬಳಿ ಸೀರೆ ಇರುವುದು ಕಾಣಿಸಿತ್ತು. ಬಳಿಕ ಅನುಮಾನಗೊಂಡು ಅವರು ಮಾಲೀಕರಿಗೆ ತಿಳಿಸಿದ್ದರು. ಈ ವೇಳೆ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಬಳಿಕ ಮಾಲೀಕರು ಸಿಸಿಟಿವಿ ವೀಡಿಯೋ ಸಮೇತ ತೆರಳಿ ಅಶೋಕ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದಾಗ ಬೆಂಗಳೂರಿನ ಹಲವೆಡೆ ಕಳ್ಳತನ ಎಸಗಿರುವುದು ಬೆಳಕಿಗೆ ಬಂದಿದೆ. ಸುಮಾರು 14 ಲಕ್ಷ ಮೌಲ್ಯದ ಸೀರೆ ಕಳ್ಳತನ ಮಾಡಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತಂದೆಯಿಂದಲೇ ಮಗಳ ಮರ್ಯಾದಾ ಹತ್ಯೆ – ಸದ್ದಿಲ್ಲದೆ ಅಂತ್ಯಸಂಸ್ಕಾರ ಮಾಡಿ ಸಿಕ್ಕಿಬಿದ್ದರು

Web Stories

Share This Article