ಬೆಂಗಳೂರು: ಸಲಿಂಗಕಾಮಕ್ಕೆ ಕರೆದು ಮೈ ಮೇಲೆ ಇದ್ದ ಚಿನ್ನ ಹಾಗೂ ಬಟ್ಟೆಯನ್ನು ಕಿತ್ತುಕೊಂಡು ಕಳುಹಿಸುತ್ತಿದ್ದ ಗ್ಯಾಂಗ್ ಈಗ ಪೊಲೀಸರ ಅತಿಥಿಯಾಗಿದೆ.
ಪೊಲೀಸರ ಅತಿಥಿಯಾಗಿರುವ ಈ ಗ್ಯಾಂಗ್ ಥ್ರೂತ್ ಪಾಯಿಂಟ್ ಎನ್ನುವ ವೆಬ್ ಸೈಟ್ ಮೂಲಕ ಸಲಿಂಗ ಕಾಮಿಗಳನ್ನು ಆಹ್ವಾನ ಮಾಡುತ್ತಿದ್ದರು. ಸಲಿಂಗ ಕಾಮದಲ್ಲಿ ಆಸಕ್ತಿ ಇರುವವರು ಅವರು ಕರೆದ ಅಡ್ರೆಸ್ಗೆ ಕೂಡ ಹೋಗುತ್ತಿದ್ದರು.
Advertisement
ಸಲಿಂಗಕಾಮಕ್ಕೆ ಎಂದು ಆ ಅಡ್ರೆಸ್ಗೆ ಹೋದಾಗ ರಾಬರಿ ಗ್ಯಾಂಗ್ ಅಲ್ಲಿಗೆ ಎಂಟ್ರಿ ಕೊಟ್ಟು ಅವರ ಚಿನ್ನಾಭರಣವನ್ನು ದೋಚುತ್ತಿದ್ದರು. ಅಲ್ಲದೇ ವಿಡಿಯೋ ಮಾಡಿದ್ದೀವಿ ಹಣ ಕೊಡು ಎಂದು ಪೀಡಿಸಿ ಅವರ ಚಿನ್ನಾಭರಣವನ್ನು ಕಿತ್ತುಕೊಂಡು ಕಳುಹಿಸುತ್ತಿದ್ದರು.
Advertisement
ಇದೇ ರೀತಿ ಮಾಡುತ್ತಿದ್ದ ಪ್ರಭಾಕರ್ ಮತ್ತು ನಾಲ್ವರು ಆರೋಪಿಗಳನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv