DharwadDistrictsKarnatakaLatestLeading NewsMain Post

ನಮ್ಮ ಭಾವನೆಗಳನ್ನು ವಿರೋಧಿಸಿದವರಿಗೆ ಕಪಾಳಮೋಕ್ಷವಾಗಿದೆ: ಮುತಾಲಿಕ್

ಹುಬ್ಬಳ್ಳಿ: ವಿರೋಧಿಸಿದವರಿಗೆ ಛೀಮಾರಿ ಹಾಕಿದೆ. ನಮ್ಮ ಭಾವನೆಯನ್ನು ವಿರೋಧಿಸಿದವರಿಗೆ ಕಪಾಳಮೋಕ್ಷವಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಬೆಳ್ಳಂಬೆಳಗ್ಗೆ ವಿನಾಯಕನ ಪ್ರತಿಷ್ಠಾಪನೆ ಮಾಡಲಾಗಿದ್ದು, ಮುತಾಲಿಕ್ ತೆರಳಿ ವಿಘ್ನ ನಿವಾರಕನ ದರ್ಶನ ಪಡೆದಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ನಿನ್ನೆ ರಾತ್ರಿ ಆನಂದದ ಸಂಗತಿ ಸಿಕ್ಕಿತು. ನ್ಯಾಯಾಲಯ ಮೂಲಕ ಸಿಹಿ ಸಂಗತಿ ಸಿಕ್ಕಿದೆ. ಈ ಜಾಗ ಸರ್ಕಾರಕ್ಕೆ ಸೇರಿದೆ, ಇದೊಂದು ಐತಿಹಾಸಿಕ ದಿನ ಎಂದರು.

ಉತ್ಸವ ಆರಂಭಿಸಿ 129 ವರ್ಷವಾಗಿದೆ. ಬ್ರಿಟೀಷರು ವಿರೋಧ ಮಾಡಲಿಲ್ಲ. ಆದರೆ ಕಾಂಗ್ರೆಸ್ ನವರು ಕುಮ್ಮಕ್ಕು ಕೊಟ್ಟು ಮುಸ್ಲಿಮರನ್ನು ಕೋರ್ಟ್ ಗೆ ಕಳಿಸುತ್ತಿದ್ದಾರೆ. ಇವತ್ತು ಕೋರ್ಟ್ ಗೆ ಹೋಗಿ ತಡೆಯಲು ಯತ್ನಿಸುತ್ತಿದ್ದಾರೆ. ನಿಮಗೆ ಗಣೇಶನ ಶಾಪ ತಟ್ಟುತ್ತೆ ನೀವು ಸರ್ವನಾಶವಾಗುತ್ತಿರಿ. ನೀವು ಯಾವುದೇ ಕೋರ್ಟ್ ಗೆ ಹೋಗಿ ಏನು ಮಾಡೋದಕ್ಕೆ ಆಗಲ್ಲ ಎಂದು ಮುತಾಲಿಕ್ ವಾಗ್ದಾಳಿ ನಡೆಸಿದರು.

ಈಗಾಗಲೇ ಗಣಪನ ಪ್ರತಿಷ್ಠಾಪನೆ ಆಗಿದ್ದು, ಪೂಜೆಯೂ ಆಗಿದೆ. ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಆಚರಣೆ ವಿರೋಧಿಸಿದ್ದಾರೆ. ನೀವು ಹಿಂದೂ ಆಗಿ ವಿರೋಧಿಸುತ್ತೀರಾ?. ನೀವು ಬೆಂಬಲ ಕೊಡಬೇಕಿತ್ತು. ಇದಕ್ಕೆ ಚುನಾವಣೆಯಲ್ಲಿ ನಿಮ್ಮನ್ನೂ ವಿಸರ್ಜನೆ ಮಾಡುತ್ತೇವೆ. ಅವರಿಗೆ ಮತ ಹಾಕದಂತೆ ಪ್ರಚಾರ ಮಾಡುತ್ತೇವೆ ಎಂದರು. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾದಲ್ಲಿ ಬೆಳ್ಳಂಬೆಳಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ

ಇದೇ ಬೇಳೆ ಮೆರವಣಿಗೆ ಮಾಡದೇ ಗಣೇಶ ಪ್ರತಿಷ್ಠಾಪನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದಕ್ಕೆ ಕಾಂಗ್ರೆಸ್ ಕಾರಣ. ಅವರೇ ಇಂಥದ್ದೊಂದು ಸಮಸ್ಯೆಗೆ ಕಾರಣವಾಗಿದೆ. ಮುಸ್ಲಿಂ ಕಿಡಿಗೇಡಿಗಳಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ. ವಕ್ಫ್ ಬೋರ್ಡ್ ಶಫಿ ಆಸಾದ್ ನನ್ನು ಸಸ್ಪೆಂಡ್ ಮಾಡಬೇಕು. ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದಿಂದ ಒದ್ದು ಕಿತ್ತೊಗೆಯಬೇಕು ಎಂದು ಆಗ್ರಹಿಸಿದದರು.

Live Tv

Leave a Reply

Your email address will not be published.

Back to top button