ಬೆಂಗಳೂರು: ಗಣೇಶ ಚತುರ್ಥಿಗೆ 2 ದಿನ ಬಾಕಿದ್ದರೂ ಸಾರ್ವಜನಿಕ ಗಣೇಶೋತ್ಸವದ ಆಚರಣೆ ವಿಚಾರದಲ್ಲಿ ಹಲವು ಗೊಂದಲಗಳು ಬಗೆ ಹರಿದಿಲ್ಲ.
ಒಂದು ವಾರ್ಡ್‍ಗೆ ಒಂದೇ ಗಣೇಶನನ್ನು ಕೂರಿಸಬಹುದು ಎಂದು ಸರ್ಕಾರ ಹೇಳಿದೆ. ಆದರೆ ಒಂದೊಂದು ವಾರ್ಡ್‍ನಲ್ಲಿ ಹತ್ತಾರು ಸಂಘಟನೆಗಳು ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕೋರಿವೆ. ಹೀಗಾಗಿ ಯಾರಿಗೆ ಅನುಮತಿ ಕೊಡಬೇಕು? ಯಾರನ್ನು ಬಿಡಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಅಧಿಕಾರಿಗಳು, ಚೀಟಿ ಮೊರೆ ಹೋಗಿದ್ದಾರೆ.
ಚೀಟಿಯಲ್ಲಿ ಯಾರ ಹೆಸರು ಬರುತ್ತದೋ ಅವರು ಗಣೇಶನನ್ನು ಕೂರಿಸಬಹುದಾಗಿದೆ. ಆದರೆ ಇದು ಎಲ್ಲಾ ಸಂಘಟನೆಗಳಿಗೆ ಒಪ್ಪಿಗೆಯಾಗಿಲ್ಲ. ಬೆಂಗಳೂರಿನ ಯಲಹಂಕ ವಲಯದ ಅಟ್ಟೂರು ವಾರ್ಡ್‍ನಲ್ಲಿ ಗಣೇಶ ಕೂರಿಸಲು ಅನುಮತಿ ನೀಡಿ ಎಂದು ಎರಡು ಅರ್ಜಿಗಳು ಬಂದಿದ್ದವು. ಲಾಟರಿ ಮೂಲಕ ಒಬ್ಬರಿಗೆ ಅವಕಾಶ ನೀಡಲಾಗಿದೆ. ಬೆಂಗಳೂರಿನಲ್ಲಿ ಸ್ಥಳ ನಿಗದಿ ವಿಚಾರದಲ್ಲಿಯೂ ಗೊಂದಲ ಉಂಟಾಗಿದೆ. ಅನುಮತಿಯನ್ನು ಪೊಲೀಸರು ಕೊಡಬೇಕಾ? ಬಿಬಿಎಂಪಿ ಎಂಜಿನಿಯರ್‍ಗಳಾ ಎಂಬುದು ಗೊತ್ತಾಗಿಲ್ಲ. ಇದನ್ನೂ ಓದಿ: ಚಾರ್ಜ್ ಶೀಟ್‍ನಲ್ಲಿ ಅನುಶ್ರೀ ಆರೋಪಿಯೆಂದು ಉಲ್ಲೇಖವಾಗಿಲ್ಲ: ಮಂಗಳೂರು ಪೊಲೀಸ್ ಆಯುಕ್ತರ ಸ್ಪಷ್ಟನೆ
ಈ ಮಧ್ಯೆ, ನಾಲ್ಕು ಅಡಿ ಮೀರಿದ ಗಣೇಶನನ್ನು ಮಾರಿದ್ರೂ ದಂಡ, ಕೂರಿಸಿದ್ರೂ ದಂಡ ವಿಧಿಸಲು ಮಾರ್ಷಲ್‍ಗಳು ಮುಂದಾಗಿದ್ದಾರೆ. ಅಲ್ಲದೇ, ಗಣೇಶ ಮೂರ್ತಿಗಳನ್ನು ಸೀಜ್ ಮಾಡಲಾಗುತ್ತೆ ಎನ್ನಲಾಗಿದ್ದು, ಮಾರಾಟಗಾರರಿಗೆ ಹೊಸ ಪೀಕಲಾಟ ಶುರುವಾಗಿದೆ. ಗಣೇಶೋತ್ಸವದ ಗೊಂದಲಗಳು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿವೆ. ನಾಳೆ ಬಿಬಿಎಂಪಿಗೆ ಮುತ್ತಿಗೆ ಹಾಕಲು ಗಣೇಶೋತ್ಸವ ಸಮಿತಿ ನಿರ್ಧರಿಸಿದೆ. ಇದನ್ನೂ ಓದಿ: ಪಾಸಿಟಿವಿಟಿ ರೇಟ್ ಶೇ.0.64ಕ್ಕೆ ಇಳಿಕೆ- ರಾಜ್ಯದಲ್ಲಿಂದು 1,102 ಹೊಸ ಕೊರೊನಾ ಕೇಸ್, 17 ಸಾವು