ಬೆಂಗಳೂರು: ನೆಲಮಂಗಲ ಪಟ್ಟಣ ಹೊನ್ನಗಂಗಯ್ಯನಪಾಳ್ಯದಲ್ಲಿರುವ ಪುರಾತನ ಬಯಲು ಉದ್ಭವ ಗಣಪತಿ ದೇವಾಲಯಲ್ಲಿ ಗಣೇಶನ ಮದುವೆ ನಡೆಯಿತು.
ನೂರಾರು ವರ್ಷದ ಇತಿಹಾಸವಿರುವ ಈ ಬಯಲು ಗಣೇಶನ ದೇವಾಲಯಲ್ಲಿ ಸನಾತನ ಕಾಲದಿಂದಲು ಈ ಕಲ್ಯಾಣೋತ್ಸವ ನಡೆಯಿತು. ದೇವತಾ ಕನ್ಯೆಯರಾದ ಸಿದ್ಧಿಬುದ್ದಿ ಜೊತೆ ವಿಜೃಂಭಣೆಯಿಂದ ವಿವಾಹಮಹೋತ್ಸವ ನಡೆಯುತ್ತಿದೆ.
Advertisement
Advertisement
ಸಾವಿರಾರು ಜನಭಕ್ತಾಧಿಗಳು ಸರತಿಸಾಲಿನಲ್ಲಿ ನಿಂತು ಸಿದ್ಧಿಬುದ್ದಿ ವಿನಾಯಕನ ಕಲ್ಯಾಣೋತ್ಸವವನ್ನು ನೋಡಿ ಕಣ್ತುಂಬಿಕೊಂಡರು. ಈ ಉದ್ಭವ ಶ್ರೀವಿನಾಯಕನ ಮೂರ್ತಿಗೆ ವಿಶೇಷ ಹೂಗಳಿಂದ ಅಲಂಕಾರ ಮಾಡಲಾಗಿದ್ದು, ವಿಶಿಷ್ಟ ಪೂಜೆ ಹೋಮ-ಹವನಾದಿಗಳು ಜರುಗಿದವು.
Advertisement
ಸುಮಾರು 451 ವರ್ಷಗಳ ಹಳೆಯದಾದ ಮುದ್ಗಲ ಪುರಾಣದ ಪ್ರಕಾರ 16 ವಿಗ್ರಹಗಳಲ್ಲಿ ಈ ಶಕ್ತಿಗಣಪತಿ ಒಂದಾಗಿದ್ದು, ತನ್ನ ತೊಡೆಯ ಪಕ್ಕದಲ್ಲಿ ಶಕ್ತಿಯನ್ನು ಕೂರಿಸಿಕೊಂಡಿರುವ ದೇವರು ಶ್ರೀ ವಿನಾಯಕ ಸ್ವಾಮಿ. ಪುರಾಣದ ಪ್ರಕಾರ ವಿನಾಯಕನಿಗೆ ಸಿದ್ಧಿಬುದ್ದಿ ಎಂಬ ಇಬ್ಬರು ಹೆಂಡತಿಯರಿದ್ದರು. ಹಿಂದೂ ಪರಂಪರೆಯ ಪುರಾಣದ ಹಿನ್ನೆಲೆಯ ಪ್ರಕಾರ, ಇಂದು ಸಿದ್ಧಿಬುದ್ದಿ ವಿನಾಯಕನ ಕಲ್ಯಾಣೋತ್ಸವ ಉತ್ಸವ ಅದ್ಧೂರಿಯಾಗಿ ಜರುಗಿತು. ವಿಶಿಷ್ಟ ಪ್ರಕಾರದ ಈ ಆಚರಣೆಯನ್ನು ನೋಡಲು ಸಾವಿರಾರು ಭಕ್ತರು ನೆರೆದಿದ್ದರು. ಇಂದು ವಿನಾಯಕನ ರಥೋತ್ಸವ ಜರುಗಲಿದೆ.