ಬೆಂಗಳೂರು: ನಗರದ ಹೊರವಲಯ ನೆಲಮಂಗಲ ತಾಲೂಕಿನ ವೆಂಕಟಪ್ಪನಪಾಳ್ಯದ ಜಮೀನಿನಲ್ಲಿರುವ ಹುಣಸೆಮರದಲ್ಲಿ ಗಣೇಶನ ಮೂರ್ತಿ ಕಂಡುಬಂದಿದ್ದು, ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.
ಇಂದು ದೇಶದ್ಯಾಂತ ಸಡಗರ ಸಂಭ್ರಮದಿಂದ ವಿಘ್ನ ನಿವಾರಕ ಗಣೇಶನ ಹಬ್ಬವನ್ನ ಆಚರಿಸುತ್ತಾರೆ. ಗಣಪನಿಗೆ ವಿವಿಧ ರೀತಿಯ ಕಲ್ಪನೆ ವಿವಿಧ ಭಂಗಿಯ ಆಕೃತಿಯನ್ನು ಕಾಣುತ್ತೇವೆ. ಹಾಗೆಯೇ ನಗರದ ಹೊರವಲಯದಲ್ಲಿ ಸುಮಾರು 80 ವರ್ಷದ ಈ ಹುಣಸೆಮರದಲ್ಲಿ ಕಳೆದ ಹದಿನೈದು ವರ್ಷಗಳ ಹಿಂದೆ ಗಣೇಶನ ಆಕಾರದಂತೆ ಪ್ರಾರಂಭವಾಗಿ ಇದೀಗ ಸುಂದರ ಮೂರ್ತಿ ರೂಪ ಪಡೆದಿದೆ.
Advertisement
Advertisement
ಇದನ್ನು ಕಂಡ ಸುತ್ತ ಮುತ್ತಲಿನ ಗ್ರಾಮಸ್ಥರು ಇಲ್ಲಿಗೆ ಬಂದು ಪೂಜೆ ಪುನಸ್ಕಾರಗಳನ್ನು ಸಲ್ಲಿಸುತ್ತಾರೆ. ಈ ಹುಣಸೆ ಗಣೇಶ ನಾನಾ ಪವಾಡಗಳಿಗೆ ಸಾಕ್ಷಿಯಾಗಿದ್ದು, ನಂಬಿದ ಭಕ್ತರಿಗೆ ಒಳಿತು ನೀಡುವ ಅಗಾಧವಾದ ನಂಬಿಕೆ ಇಲ್ಲಿಯದ್ದಾಗಿದೆ.
Advertisement
ಇದೇ ಜಮೀನಿನಲ್ಲಿ ಇರುವ ಬೋರ್‌ವೆಲ್‌ನಲ್ಲಿ ನೀರು ದೊರೆತಿರಲಿಲ್ಲವಂತೆ. ಈ ಗಣೇಶನ ಮೂರ್ತಿ ಮೂಡಿದ ನಂತರ ನಮಗೆ ಬೋರ್‌ವೆಲ್‌ನಲ್ಲಿ ನೀರು ದೊರಕಿ ಈ ತೋಟವು ಸುಂದರವಾಗಿ ರೈತನಿಗೆ ನೆರವಾಗಿದೆ. ಹೀಗಾಗಿ ನಾನಾ ಪವಾಡಗಳಿಗೆ ಈ ಗಣೇಶ ಸಾಕ್ಷಿಯಾಗಿದ್ದು, ಇಂದು ಗಣೇಶನ ಹಬ್ಬದ ದಿವಸ ವಿಶೇಷ ಪೂಜೆಯನ್ನು ಭಕ್ತರು ಸಲ್ಲಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv